ಹುಬ್ಬಳ್ಳಿ –
ಬೃಹತ್ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆ – V.A.K ಫೌಂಡೇಶನ್ ನಿಂದ ವೆಂಕಟೇಶ ಕಾಟವೆ ನೇತ್ರತ್ವದಲ್ಲಿ ನವಂಬರ್ 14 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳ…..
ಸದಾ ಒಂದಿಲ್ಲೊಂದು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಮಾಡುತ್ತಿರುವ ಹುಬ್ಬಳ್ಳಿಯ ಯುವ ಬಿಜೆಪಿ ಮುಖಂಡ ವೆಂಕಟೇಶ ಕಾಟವೆಯವರು ಮತ್ತೊಂದು ಮಹಾನ್ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಹೌದು ದೊಡ್ಡ ಪ್ರಮಾಣದಲ್ಲಿ ವೆಂಕಟೇಶ್ ಅಶೋಕ ಕಾಟವೆ ಯವರು ನವಂಬರ್ 14 ರಂದು ನಗರದಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದ್ದಾರೆ.
ವೆಂಕಟೇಶ ಅವರ ನೇತೃತ್ವದ (V.A.K) ಫೌಂಡೇಶನ್ ವತಿಯಿಂದ ಇದೇ ದಿನಾಂಕ 14-11-2025 ಶುಕ್ರವಾರ ರಂದು ಹುಬ್ಬಳ್ಳಿಯ ಕೆ.ಎಲ್.ಇ (K L E) ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈ ಒಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಪೂರ್ವಭಾವಿಯಾಗಿ ಉದ್ಯೋಗ ಮೇಳದ ಪೋಸ್ಟರ್ ನ್ನು ಬಿಡುಗಡೆ ಮಾಡಲಾಯಿತು.ನಗರದ ಪತ್ರಕರ್ತರ ಭವನದಲ್ಲಿ ಈ ಒಂದು ಪೋಸ್ಟರ್ ನ್ನು ಬಿಡುಗಡೆ ಮಾಡಲಾಯಿತು.

ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದ್ದು,ಬೆಂಗಳೂರು ಸೇರಿದಂತೆ ರಾಜ್ಯದ 75ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದು ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗ ಅವಕಾಶ ಈ ಮೇಳದಲ್ಲಿ ಸಿಗಲಿದ್ದು ಆಸಕ್ತರು ತಮ್ಮ ದಾಖಲೆಗ ಳೊಂದಿಗೆ ಆಗಮಿಸಿ ಸದುಪಯೋಗ ಪಡೆದು ಕೊಳ್ಳಬೇಕೆಂದು ಫೌಂಡೇಶನ್ ಅಧ್ಯಕ್ಷ ವೆಂಕಟೇಶ್ ಕಾಟವೆ ತಿಳಿಸಿದ್ದು
ಪತ್ರಿಕಾಗೋಷ್ಠಿಯಲ್ಲಿ ವೆಂಕಟೇಶ್ ಕಾಟವೆ ಅವರೊಂದಿಗೆ ರಾಜು ಪಾಟೀಲ್,ಸಚಿನ್ ಕಾಟವೆ, ಸುಜನ್ ಇಜಾರಿ, ಕಾರ್ತಿಕ್ ಪವಾರ್, ಆನಂದ್ ಬಾಕಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..






















