ಧಾರವಾಡ –
BDCC ಬ್ಯಾಂಕ್ ಗೆ ಹೊಸದಾಗಿ ಆಯ್ಕೆಯಾದ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಿದ ಮಂಜುನಾಥ ಮಕ್ಕಳಗೇರಿ – ವಿದೇಶ ಪ್ರವಾಸ ಮುಗಿಸಿಕೊಂಡು ಸುತ್ತಾಟ ಆರಂಭಿಸಿದ ಬಡವರ ಬಂಧು ರೈತರ ನಾಯಕ ಜನ ಮೆಚ್ಚಿದ ಜನ ನಾಯಕ…..
ವಿದೇಶ ಪ್ರವಾಸದಲ್ಲಿದ್ದ ಧಾರವಾಡದ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕ ಬಡವರ ಬಂಧು ರೈತರ ಆಶಾಕಿರಣ ಜನ ಮೆಚ್ಚಿದ ಜನ ನಾಯಕರು ಯುವಕರ ಕಣ್ಮಣಿಯಾಗಿರುವ ಮಂಜುನಾಥ ಮಕ್ಕಳಗೇರಿ ಯವರು ನಾಡಿಗೆ ಆಗಮಿಸಿದ್ದಾರೆ.ಸುಧೀರ್ಘವಾದ ವಿದೇಶ ಪ್ರವಾಸವನ್ನು ಮುಗಿಸಿಕೊಂಡು ಧಾರವಾಡಗೆ ಆಗಮಿಸುತ್ತಿದ್ದಂತೆ ಹಲವಾರು ಕಾರ್ಯ ಚಟುವಟಿಕೆ ಗಳನ್ನು ಆರಂಭ ಮಾಡಿದ್ದಾರೆ.
ಸಾಯಿರಾಮ್ ಡೆವಲಪರ್ಸ & ಬಿಲ್ಡರ್ಸ ಮಾಲಕ ರಾಗಿರುವ ಮಂಜುನಾಥ ಮಕ್ಕಳಗೇರಿಯವರು ಇತ್ತೀಚಿಗಷ್ಟೇ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ವಿರುಪಾಕ್ಷಪ್ಪ ಮಾಮನಿ ಅವರನ್ನು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.ಸವದತ್ತಿಯ ನಿವಾಸದಲ್ಲಿ ಬೇಟಿ ಮಾಡಿದ ಅವರು ಸನ್ಮಾನಿಸಿ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದರು.
ಮಂಜುನಾಥ ಮಕ್ಕಳಗೇರಿ ಅವರೊಂದಿಗೆ ಮಡಿವಾಳಪ್ಪ ಇರಸನ್ನವರ, ಹನಮಂತಗೌಡ ಹಳಕಟ್ಟಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ……






















