ಬೆಂಗಳೂರು –
ಪುತ್ರನ ಮದುವೆಗೆ CM, DCM ಗೆ ಆಮಂತ್ರಣ ನೀಡಿದ ಶಾಸಕ ಎನ್ ಹೆಚ್ ಕೋನರಡ್ಡಿ – ಡಿಸೆಂಬರ್ 7 ರಂದು ನವಲಗುಂದ ದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲಿದ್ದಾರೆ ನವೀನ್…..
ಸರಳ ಸಜ್ಜನಿಕೆಯ ರಾಜಕಾರಣಿ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಎನ್ ಹೆಚ್ ಕೋನರಡ್ಡಿ ಯವರು ಮತ್ತೊಂದು ಸರಳತೆಗೆ ಸಾಕ್ಷಿಯಾಗಲಿದ್ದಾರೆ. ಹೌದು ವ್ಯಕ್ತಿತ್ವದಲ್ಲೂ ತುಂಬಾ ಸರಳವಾಗಿರುವ ಕೋನರಡ್ಡಿಯವರ ಆಸೆಯಂತೆ ಪುತ್ರ ನವೀನ್ ಕೂಡಾ ಸರಳ ಸಜ್ಜನಿಕೆಯ ಯುವಕನಾಗಿದ್ದು ತಂದೆ ತಾಯಿ ಯವರ ಇಚ್ಚೆಯಂತೆ ಅದ್ದೂರಿಯಾಗಿ ಮದುವೆಯಾ ಗದೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲಿದ್ದಾರೆ
ಡಿಸೆಂಬರ್ 7 ರಂದು ನವಲಗುಂದದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಮೂಹಿಕ ವಿವಾಹಗಳು ಆಗಲಿದ್ದು ಈ ಒಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವೀನ್ ಕೋನರಡ್ಡಿಯವರು ಹಸೆ ಮಣೆ ಏರಲಿದ್ದಾರೆ. ಈ ಒಂದು ಹಿನ್ನಲೆಯಲ್ಲಿ ಶಾಸಕ ಎನ್ ಹೆಚ್ ಕೋನರಡ್ಡಿ ಯವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿ ಯವರಿಗೆ ಆಮಂತ್ರಣವನ್ನು ನೀಡಿದರು.
ಬೆಂಗಳೂರಿನ ನಿವಾಸಕ್ಕೆ ಪತ್ನಿಯೊಂದಿಗೆ ತೆರಳಿದ ಶಾಸಕರು ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿ ಆಮಂತ್ರಿಸಿದರು.ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ ಪುತ್ರನಿಗೆ ಮತ್ತು ವಧು ವರ ನವ ಜೋಡಿಗೆ ಹರಸಿ ಆಶೀರ್ವದಿಸಲು ತಾವು ಆಗಮಿಸಬೇಕೆಂದು ಮದುವೆ ಆಮಂತ್ರಣ ನೀಡಿ ಸ್ವಾಗತಿಸಿದರು.
ಈ ಒಂದು ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..





















