ಧಾರವಾಡ –
ರಾಷ್ಟ್ರಮಟ್ಟದ ರೈಪಲ್ ಶೂಟಿಂಗ್ ಗೆ ಆಯ್ಕೆಯಾದ ಮಾಜಿ ಶಾಸಕ ಅಮೃತ ದೇಸಾಯಿ ದಂಪತಿಗಳ ಪುತ್ರಿ ಸ್ವರೂಪಿಣಿ – ನಮ್ಮ ಹುಟ್ಟು ಹಬ್ಬಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದಾಳೆ ಎಂದು ಬಣ್ಣಿಸಿದ AD ದಂಪತಿಗಳು…..
ರಾಜ್ಯಮಟ್ಟದ ಶಾಲಾ ಮಕ್ಕಳ ರೈಪಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮಾಜಿ ಶಾಸಕ ಅಮೃತ ದೇಸಾಯಿ ಯವರ ಪುತ್ರಿ ಸ್ವರೂಪಿಣಿ ಐತಿಹಾಸಿದ ಸಾಧನೆ ಮಾಡಿದ್ದಾಳೆ. ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ರಾಜ್ಯ ಮಟ್ಟದ ರೈಪಲ್ ಸ್ಪರ್ಧೆಯಲ್ಲಿ ಮೂರನೇಯ ಸ್ಥಾನ ವನ್ನು ಪಡೆದುಕೊಂಡು ರಾಷ್ಟ್ಪಮಟ್ಟಕ್ಕೆ ಆಯ್ಕೆಯಾಗಿ ದ್ದಾಳೆ.
ಇನ್ನೂ ಪುತ್ರಿ ಈ ಒಂದು ಸಾಧನೆಯನ್ನು ಮಾಡುತ್ತಿದ್ದಂತೆ ಇತ್ತ ಮಾಜಿ ಶಾಸಕ ಅಮೃತ ದೇಸಾಯಿ ದಂಪತಿಗಳು ಈ ಒಂದು ವಿಚಾರ ಕುರಿತಂತೆ ನಮ್ಮ ಮನೆಯ ಪುಟಾಣಿ ಮಗಳು ಸ್ವರೂಪಿಣಿ ದೇಸಾಯಿ ರಾಜ್ಯಮಟ್ಟದ ಶಾಲಾ ಮಕ್ಕಳ ರೈಪೆಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ನನ್ನ ಹಾಗೂ ನನ್ನ ಧರ್ಮಪತ್ನಿ ಜನ್ಮದಿನಕ್ಕೆ ಬಹುದೊಡ್ಡ ಉಡುಗೊರೆ ಕೊಟ್ಟಿದ್ದಾಳೆ
ತಮ್ಮೊಂದಿಗೆ ಹಂಚಿಕೊಳ್ಳಲು ಹೆಮ್ಮೆಯಾಗುತ್ತಿದೆ. ಅಭಿನಂದನೆಗಳು ಸ್ವರೂ ಪುಟ್ಟಾ ಮುಂಬರುವ ದಿನಗಳಲ್ಲಿ ದೇಶದ ಕ್ರೀಡಾ ಜಗತ್ತಿಗೆ ನೀನೊಂದು ಆಸ್ತಿಯಾಗು ಎಂದು ಹಾರೈಸುತ್ತೇನೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಉಲ್ಲೇಖ ಮಾಡಿ ಶುಭವನ್ನು ಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..






















