ಬೆಂಗಳೂರು –
ನಾಡಿನ ಸಮಸ್ತ ಶಿಕ್ಷಕರ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಃಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಯವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಯಾದರು
ಹೌದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಸಚಿವರಾದ ಮಧು ಬಂಗಾರಪ್ಪ ನವರನ್ನು ಭೇಟಿ ಮಾಡಿ ಹಲವು ವಿಚಾರ ಗಳ ಕುರಿತು ಚರ್ಚೆಯಲ್ಲಿ ಮಾಡಲಾಯಿತು
ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದ ಅಂತಿಮ ನಿಯಮಗಳನ್ನು ಪ್ರಕಟಿಸ ಬೇಕೆಂದು ಒತ್ತಾಯಿಸಲಾಯಿತು.ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ವಿಶೇಷ ಪ್ರಕರಣ ಹಾಗೂ ತೊಂದರೆ ಯಲ್ಲಿರುವ ಶಿಕ್ಷಕರನ್ನು ಬಿಡುಗಡೆಗೊಳಿಸಲು ನಿರ್ದೇಶನ ನೀಡಬೇಕೆಂದು ವಿನಂತಿಸಲಾಯಿತು.
ಶಿಕ್ಷಕರ ವರ್ಗಾವಣೆ ಕಾಯಿದೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲಿಕ್ಕೆ ವರ್ಗಾವಣೆ ಕಾಯ್ದೆಯನ್ನು ಬರುವ ಡಿಸೆಂಬರ್ ಅಧಿವೇಶನದಲ್ಲಿ ಮಂಡಿಸಬೇಕೆಂದು ಒತ್ತಾಯಿಸಲಾಯಿತು.ಟಿಇಟಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ Review Petition ಅರ್ಜಿ ಸಲ್ಲಿಸುವ ಬಗ್ಗೆ ತಕ್ಷಣ ಗೌರವಾನ್ವಿತ ಸುಪ್ರೀಂಕೋರ್ಟಿಗೆ ಮರುಪರಿಶೀಲನ ಅರ್ಜಿ ಸಲ್ಲಿಸಬೇಕೆಂದು ವಿನಂತಿಸಲಾಯಿತು.
ಶಿಕ್ಷಕರ ಬಡ್ತಿ ಪ್ರಕ್ರಿಯೆಗಳು ತುಂಬಾ ವಿಳಂಬವಾಗಿದ್ದು ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳನ್ನು ಇತ್ಯರ್ಥಪಡಿಸಿ ಬಡ್ತಿ ಪ್ರಕ್ರಿಯೆಗಳನ್ನು ಪ್ರಾರಂಭಿಸ ಬೇಕೆಂದು ವಿನಂತಿಸಲಾಯಿತು.
ಸಚಿವರು ಈ ಒಂದು ಎಲ್ಲಾ ಪ್ರಮುಖ ಬೇಡಿಕೆ ಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕಂಡು ಬಂದಿತು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..






















