ತುಮಕೂರು –
ಕಾನೂನು ಸಚಿವ ಮಾಧುಸ್ವಾಮಿ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ.
ನೀರು ಕೇಳಿದ್ದಕ್ಕೆ ಹೀಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಸಚಿವ ಮಾಧುಸ್ವಾಮಿ.ಶಿರಾ ತಾಲ್ಲೂಕಿನ ಗೋಪಾಲ ದೇವರಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಕುಡಿಯುವ ನೀರು,ಮೂಲಭೂತ ಸೌಕರ್ಯಕ್ಕಾಗಿ ಈ ಹಿಂದೆ ನಡೆದ ಗ್ರಾ.ಪಂ.ಚುನಾವಣೆಯನ್ನು ಬಹಿಷ್ಕರಿಸಿದ್ದರು ಗ್ರಾಮಸ್ಥರು.ಚುನಾವಣೆ ಬಹಿಷ್ಕರಿಸಿದ್ದಕ್ಕೆ ಕುಪಿತಗೊಂಡು ಆಕ್ರೋಶವನ್ನು ವ್ಯಕ್ತಪಡಿಸಿದರು ಮಾಧುಸ್ವಾಮಿ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ, ಹೇಮಾವತಿ ನೀರು ಕೇಳಿದ ರೈತರಿಗೆ ತರಾಟೆಗೆ ತಗೆದುಕೊಂಡಿದ್ದಾರೆ.
ಯಾವಾನಾದ್ರು ಬೋಸುಡಿಕೆ ಮಗ ಬಂದು ನನ್ನ ಕೇಳಿದ್ದೀರಾ ಎನ್ನುತ್ತಾ ತರಾಟೆಗೆ ತಗೆದುಕೊಂಡಿದ್ದಾರೆ. ಅಲ್ಲದೇ ನೋಡೋಣ ಬಿಡ್ಸು,ಯಾರ್ ಕೈಯಲ್ಲಿ ನೀರು ಬಿಡುಸ್ತ್ಯೋ ಎಂದಿದ್ದಾರೆ.
ಶೇಷೇನಹಳ್ಳಿ ಕೆರೆ,ದೊಡ್ಡ ಅಗ್ರಹಾರ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕು ಅಂತಾ ರೈತರು ಒತ್ತಾಯಿಸಿದ್ದರು.ಸಧ್ಯ ಮಾಧುಸ್ವಾಮಿ ತರಾಟೆಯ ವಿಡಿಯೋ ಸಖತ್ ವೈರಲ್ ಆಗಿದೆ.