ಬೆಂಗಳೂರು –
ಕರೋನಾ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶಾಲಾ ಕಾಲೇಜುಗಳ ಆರಂಭಕ್ಕೇ ಗ್ರೀನ್ ಸಿಗ್ನಲ್ ನೀಡಿದೆ. ಅತ್ತ ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದಂತೆ ಇತ್ತ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ.2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಗಳನ್ನು ವಿತರಿಸುವ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುತ್ತೋಲೆ ಹೊರಡಿಸಿದೆ. ತರಗತಿಗಳಿಗೆ ಅನುಸಾರವಾಗಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ದರವನ್ನು ನಿಗದಿ ಪಡಿಸಿ ಹೊಸದಾದ ಸುತ್ತೊಲೆಯನ್ನು ಇಲಾಖೆ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸುತ್ತೋಲೆ ಹೊರಡಿಸಿದ್ದು, ಹಿಂದಿನ ವರ್ಷಗಳಂತೆ 2020-21ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಬಸ್ ಪಾಸುಗಳನ್ನು ವಿತರಿಸಲಿದ್ದು, ಈ ವಿಷಯದಲ್ಲಿ ಕೆಳಕಂಡ ನಿರ್ದೇಶನಗಳನ್ನು ಅನುಸರಿಸಲು ಆದೇಶಿಸಿದೆ.
2020-21ನೇ ಸಾಲಿಗೆ ವಿದ್ಯಾರ್ಥಿ ಪಾಸು ದರಗಳು ಈ ಕೆಳಕಂಡಂತಿವೆ
o ಪ್ರಾಥಮಿಕ ಶಾಲೆ – 10 ತಿಂಗಳ ಅವಧಿಗೆ ಎಲ್ಲರಿಗೂ ಉಚಿತವಾಗಿದ್ದರೂ, ಪಾಸಿನ ಸಂಸ್ಕರಣಾ ಶುಲ್ಕವಾಗಿ ರೂ.150 ಶುಲ್ಕವನ್ನು ನೀಡಬೇಕಿದೆ.
o ಪ್ರೌಢಾಲೆ ಬಾಲಕರು – 10 ತಿಂಗಳ ಅವಧಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.600 ಜೊತೆಗೆ ಸಂಸ್ಕರಣಾ ಶುಲ್ಕ ರೂ.750. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿದ್ದರೂ ಸಂಸ್ಕರಣಾ ಶುಲ್ಕವಾಗಿ ರೂ.150 ಶುಲ್ಕ ನೀಡಬೇಕಿದೆ.
o ಪ್ರೌಢಶಾಲೆಯ ಬಾಲಕಿಯರು – 10 ತಿಂಗಳ ಅವಧಿಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ರೂ.550. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
o ಪಿಯುಸಿ, ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ – 10 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ.1050. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
o ಐಟಿಐ ವಿದ್ಯಾರ್ಥಿಗಳಿಗೆ – 12 ತಿಂಗಳ ಅವಧಿಗೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ರೂ.1310. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
o ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ – 10 ತಿಂಗಳ ಅವಧಿಗೆ ರೂ.1550. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
o ಸಂಜೆ ಕಾಲೇಜು, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ – 10 ತಿಂಗಳ ಅವಧಿಗೆ ರೂ.1350. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಿದರೂ, ರೂ.150 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಿದೆ.
ಇನ್ನೂ ಸಂಸ್ಕರಣಾ ಶುಲ್ಕವಾಗಿ ರೂ.100 ಪಡೆಯುವುದನ್ನು ಮುಂದುವರೆಸಿರುವ ನಿಗಮವು, ಅಪಘಾತ ಪರಿಹಾರ ನಿಧಿ ವಂತಿಕೆ ಮಾಸಿಕ ರೂ.5 ರಂತೆ, 10 ತಿಂಗಳಿಗೆ ರೂ.50 ಮತ್ತು 12 ತಿಂಗಳಿಗೆ ರೂ.60 ಪಡೆಯುವುದನ್ನು ಮುಂದುವರೆಸಿದೆ.
ವಿದ್ಯಾರ್ಥಿಗಳು ಪಾಸ್ ಗಾಗಿ ಅರ್ಜಿ ಸಲ್ಲಿಸುವ ವಿಧಾನ
o ಪ್ರಸಕ್ತ ಸಾಲಿನಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿಯನ್ನು ವಿದ್ಯಾರ್ಥಿ ಬಸ್ ಪಾಸ್ ಪಡೆಯಲು ಸಲ್ಲಿಸಬೇಕು.
o ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಸಲ್ಲಿಸಿರುವ ಅರ್ಜಿಗೆ ಶಾಲಾ, ಕಾಲೇಜುಗಳ ಮುಖ್ಯಸ್ಥರಿಂದ ರುಜುಗೊಳಿಸಿ, ನೇರವಾಗಿ ಬಸ್ ನಿಲ್ದಾಣದ ಪಾಸ್ ಕೌಂಟರ್ ನಲ್ಲಿ ಹಣ ಪಾವತಿಸಿ, ಪಡೆಯಬಹುದು.
o ಇಲ್ಲವೇ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿ, ತದನಂತರ ಭರ್ತಿಗೊಳಿಸಿದ ಅರ್ಜಿಯನ್ನು ಮುದ್ರಣಗೊಳಿಸಿ, ತಾವು ಅಭ್ಯಸಿಸುತ್ತಿರುವ ಶಾಲೆ, ಕಾಲೇಜುಗಳಲ್ಲಿ ನಿಗದಿತ ಫೀ ಸಹಿತ ಸಲ್ಲಿಸುವುದು. ಶಾಲಾ, ಕಾಲೇಜುಗಳಿಂದ ಅರ್ಜಿಗಳನ್ನು ಪರಿಶೀಲಿಸಿ, ಮುದ್ರಿತ ಅರ್ಜಿಗಳ ಮೇಲೆ ಶಾಲಾ, ಕಾಲೇಜು ಮುಖ್ಯಸ್ಥರಿಂದ ಮೇಲು ರುಜುಗೊಳಿಸಿ, ಶಾಲಾ, ಕಾಲೇಜುಗಳ ಮುಖಾಂತರ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
o ವಿದ್ಯಾರ್ಥಿಗಳು ಪಾಸಿನ ಶುಲ್ಕವನ್ನು ಸಂಬಂಧಪಟ್ಟ ಶಾಲಾ, ಕಾಲೇಜಿನಲ್ಲಿ ಅಥವಾ ಕೆಎಸ್ ಆರ್ ಟಿ ಸಿ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್ ನಗಳಲ್ಲಿ ಪಾವತಿಸಲು ಅವಕಾಶವಿರುತ್ತದೆ.
o ಮುಂದುವರೆದು ಸೇವಾಸಿಂಧು Online Payment ವ್ಯವಸ್ಥೆ ಸದ್ಯದಲ್ಲಿಯೇ ಜಾರಿಯಾಗಲಿದ್ದು, ವಿವರಗಳನ್ನು ನಂತ್ರದ ದಿನಗಳಲ್ಲಿ ಸಂಸ್ಥೆ ತಿಳಿಸಲಿದೆ.
ಈ ರೀತಿಯಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ ಪಾಸ್ ಪಡೆಯಬಹುದಾಗಿದ್ದು, ಪಾಸ್ ಪಡೆಯುವಾಗ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸುವಂತೆಯೂ ಕೆ ಎಸ್ ಆರ್ ಟಿ ಸಿ ಸುತ್ತೋಲೆಯಲ್ಲಿ ಸೂಚನೆ ನೀಡಿದ್ದು ಇದೇಲ್ಲವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಪಾಸ್ ಗಳನ್ನು ತಗೆದುಕೊಂಡು ಬಸ್ ನಲ್ಲಿ ಪ್ರಯಾಣಿಸಬೇಕು.
ಇವೆಲ್ಲದರ ನಡುವೆ ಸಧ್ಯ ಪದವಿ ಕಾಲೇಜುಗಳ ಅಂತಿಮ ವರುಷದ ವರ್ಗಗಳು ಮಾತ್ರ ಆರಂಭಗೊಂಡಿದ್ದು ಇನ್ನೂಳಿದ ವರ್ಗಗಳ ಆರಂಭಕ್ಕೇ ಸರ್ಕಾರ ಯಾವಾಗ ಅನುಮತಿ ನೀಡುತ್ತದೆ ಎಂದುಕೊಂಡು ಉಳಿದ ವಿದ್ಯಾರ್ಥಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವೆಲ್ಲದರ ನಡುವೆ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ನೋಡಿದ್ರೆ ಉಳಿದ ವರ್ಗಗಳು ಶೀಘ್ರದಲ್ಲಿಯೇ ಆರಂಭವಾಗುವ ಸೂಚನೆ ಕಂಡು ಬರುತ್ತಿದ್ದು ಇನ್ನೂಳಿದ ವರ್ಗಗಳು ಓಪನ್ ಆಗುತ್ತವೆನಾ ಇಲ್ಲ ಎಂಬುದನ್ನು ಕಾದು ನೋಡಬೇಕಿದೆ.