ತುಮಕೂರು-
ಖಾತೆ ಹಂಚಿಕೆ ವಿಚಾರದಲ್ಲಿ ನನಗೆ ಯಾವುದೇ ಅಸಮಾಧನವಿಲ್ಲ ಈ ಕುರಿತಂತೆ ನಾನು ಬೆಳಿಗ್ಗೆ ಯಿಂದಲೇ ಮಾತನಾಡಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ನಾನು ಬೆಳಗ್ಗೆಯಿಂದ ಮಾತನಾಡಿದ್ದೇನೆ ನನಗೆ ಯಾವ ಅಸಮಾಧಾನವೂ ಇಲ್ಲ. ಖಾತೆ ಕೊಡೋದು ಹಂಚಿಕೆ ಮಾಡೋದು ಸಿಎಂ ಪರಮಾಧಿಕಾರ ಎಂದರು. ಸಿದ್ದಗಂಗಾ ಮಠದಿಂದ ಸಿಎಂ ಹೋದ್ರಾ ನಂಗೆ ಗೊತ್ತಿಲ್ಲ ನಾನು ಲೇಟಾಗಿ ಬಂದೆ ಎಂದು ಯಾವುದೇ ವಿಚಾರ ಗೊತ್ತಿಲ್ಲದ ಹಾಗೇ ಮಾತನಾಡಿದರು.
ಇನ್ನೂ ನಾನೇನಾದರೂ ರಾಜೀನಾಮೆ ಕೊಟ್ರೆ ನಾನು ಹೇಳೊದು ಮೊದಲು ಮಾಧ್ಯಮಕ್ಕೆ ಎನ್ನುತ್ತಾ ರಾಜೀನಾಮೆ ಸುದ್ದಿ ಹಬ್ಬಿಸಿದವರಿಗೆ ಟಾಂಗ್ ನೀಡಿದರು.
ನಮಗೆ ಕ್ಯಾಪ್ಟನ್ ಅಂಪೈರ್ ನಮ್ಮ ಚೀಪ್ ಮಿನಿಸ್ಟರ್ ಅವ್ರು ಯಾವ್ದು ಮಾಡು ಅಂತಾರೋ ಅದನ್ನು ಮಾಡ್ತೀವಿ ಯಾವ್ದನ್ನು ನಿಭಾಯಿಸೋಕೆ ಹೇಳ್ತಾರೋ ಅದನ್ನೇ ನಿಭಾಯಿಸ್ತಿನಿ ಎಂದರು.ಇದು ಚೀಪ್ ಮೀನಿಸ್ಟರ್ ಪರಮಾಧಿಕಾರ ಅವ್ರು ಯಾವುದನ್ನು ಹೇಳಿದ್ದಾರೋ ಅದನ್ನು ಮಾಡ್ತಿವಿ ಅಷ್ಟೇ ಎಂದರು.