ಕಲಬುರ್ಗಿ-
ಪ್ರೀಯಾಂಕ ಖರ್ಗೆ ವಿರುದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಗುಡುಗಿದ್ದಾರೆ. ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದಲೇ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಮಾಲೀಕಯ್ಯ ಗುತ್ತೆದಾರ ಪ್ರೀಯಾಂಕ ಖರ್ಗೆ ವಿರುದ್ದ ಕಿಡಿಕಾರಿದ್ದಾರೆ.ನಿನ್ನ ತಂದೆ ತಾಯಿ ಎಷ್ಟೊಂದು ಒಳ್ಳೆಯವರಿದ್ದಾರೆ ನೋಡು.ನೀನು ಇನ್ನೂ ಹುಡುಗ ನಿನಗೆ ಎಷ್ಟು ದುರಂಕಾರವಿದೆ ನಿನ್ನ ದುರಹಂಕಾರದಿಂದ ನಿಮ್ಮ ತಂದೆ ಕಳೆದ ವರುಷ ನಡೆದ ಎಂಪಿ ಎಲೆಕ್ಷನ್ ನಲ್ಲಿ ಸೋತ್ರು . ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಯವರು ಒಳ್ಳೇಯ ಸಂಭಂಧವನ್ನಿಟ್ಟುಕೊಂಡು ಆತ್ಮೀಯರಾಗಿದ್ದೇವು. ಆದರೆ ನನ್ನ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ನಡುವೆ ಹುಳಿ ಹಿಂಡಿದ್ದು ನೀನೆ ನಾನು ಕಾಂಗ್ರೆಸ್ ಬಿಡುವ ಸನ್ನಿವೇಶ ನಿರ್ಮಾಣ ಮಾಡಿದ್ದು ನೀನೆ . ನನ್ನ ಬಗ್ಗೆ ಮಾತಾಡೋದಿದ್ರೆ ಬಾ ಒಂದು ನೇರ ಸಂವಾದ ನಡೆಯಲಿ ಎಂದು ಕಲಬುರಗಿಯಲ್ಲಿ ಆಸ್ಪತ್ರೆಯಿಂದ ಮಾತನಾಡಿರುವ ವಿಡಿಯೋ ಹಂಚಿಕೆ ಮಾಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ. ಇದರೊಂದಿಗೆ ಪರೋಕ್ಷವಾಗಿ ಶಾಸಕ ಪ್ರಿಯಾಂಕ್ ಖರ್ಗೆಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಾಲೀಕಯ್ಯ ಗುತ್ತೇದಾರ್ ವಿರುದ್ಧ ಪ್ರೀಯಾಂಕ ಖರ್ಗೆ ಕಿಡಿಕಾರಿದ್ದರು. ಇದನ್ನು ನೋಡಿದ ಗುತ್ತೇದಾರ್ ಸಾಹೇಬ್ರು ಆಸ್ಪತ್ರೆಯಲ್ಲಿದ್ದರೂ ಕೂಡಾ ಬೆಡ್ ಮೇಲೆಯೇ ಮಲಗಿಕೊಂಡು ಮಾತನಾಡಿ ವಿಡಿಯೋ ಹಂಚಿಕೊಂಡಿದ್ದಾರೆ.