ಭಟ್ಕಳ –
ಶ್ರೀರಾಮ ಸೇನೆಯ ಉಪಾಧ್ಯಕ್ಷ ಜಯಂತ ನಾಯಕ ಮುರುಡೇಶ್ವರ ದಲ್ಲಿ ಹಫ್ತಾ ವಸೂಲಿ ಮಾಡಲು ಹೊರಟಿದ್ದು ಇವರಿಂದ ಮುರುಡೇಶ್ವರ ನಾಗರಿಕರಿಗೆ ರಕ್ಷಣೆ ನೀಡಬೇಕು. ಪ್ರವಾಸಿಗರು ಬರುವ ಮುರುಡೇಶ್ವರ ಕಡಲ ತೀರದಲ್ಲಿ ಅನೇಕ ಮಂದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ.ಹೀಗಾಗಿ ಇವರಿಂದ ತೊಂದರೆ ಆಗುತ್ತಿದೆ ಎಂದು ಮುರುಡೇಶ್ವರ ನಾಗರೀಕರು ಆರೋಪ ಮಾಡಿದ್ದಾರೆ.
ಶ್ರೀರಾಮ ಸೇನೆಯ ರಾಜ್ಯ ಉಪಾಧ್ಯಕ್ಷ ಜಯಂತ ನಾಯ್ಕರನ್ನು ಗಡಿಪಾರು ಮಾಡಬೇಕು ಎಂದು ನಾಗರಿಕರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಜಯಂತ ನಾಯ್ಕ ಇಲ್ಲಿನ ಕಡಲ ತೀರದಲ್ಲಿ ವ್ಯಾಪಾರ ವಹಿವಾಟು ಮಾಡುವವರು ತನಗೆ ಹಣ ನೀಡಬೇಕು ಎಂದು ಜಯಂತ ನಾಯ್ಕ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಪ್ರವಾಸಿಗರಿಗೂ ತೊಂದರೆ ನೀಡುತ್ತಿದ್ದು, ಈತ ತನಗೆ ಉನ್ನತ ರಾಜಕಾರಣಿಗಳ ಬೆಂಬಲವಿದೆ ಎಂದು ಹೇಳಿಕೊಳ್ಳುತ್ತಾ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ದೂರಲಾಗಿದೆ.
ಜಯಂತ ನಾಯ್ಕ ಮೇಲೆ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿದ್ದು ಈ ಹಿಂದೆ ಗಡಿಪಾರಿಗೆ ಆದೇಶ ಕೂಡಾ ಆಗಿತ್ತು ಎಂದೂ ಮನವಿಯಲ್ಲಿ ತಿಳಿಸಲಾಗಿದೆ.ಮುರ್ಡೇಶ್ವರದಲ್ಲಿ ಸದಾ ಒಂದಿಲ್ಲೊಂದು ಗಲಾಟೆ, ವಸೂಲಿ ಮಾಡುತ್ತಾ ಬಂದಿರುವ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.
ಮನವಿಯನ್ನು ಸಹಾಯಕ ಆಯುಕ್ತ ಭರತ್ ಎಸ್. ಸ್ವೀಕರಿಸಿದ್ದು ಮುಂದೆ ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು