ರಾಯಚೂರು –
ದೇಶದಲ್ಲಿ ಅಬ್ಬರಿಸಿ ಬೊಬ್ಬೆರೆಯುತ್ತಿರುವ ಕರೋನಾ ಮಾಹಾಮಾರಿಯಿಂದ ಎಲ್ಲರೂ ಕಂಗಾಲಾಗಿದ್ದಾರೆ. ನಮಗೂ ಬಂದ ಗಿಂದಿತಾ ಬಂದರೆ ಹೇಗಪ್ಪಾ ಮಾ ಡೋದು ಗುಣಮುಖರಾಗುತ್ತೇವಾ ಇಲ್ಲ ದಿನ ದಿಂದ ದಿನಕ್ಕೆ ಹೀಗೆ ಈ ಒಂದು ಕೋವಿಡ್ ನಿಂದ ಎಲ್ಲರೂ ಭಯಭೀತರಾಗಿದ್ದು ಇವೆಲ್ಲದರ ನಡುವೆ ಇಲ್ಲೊಬ್ಬ 97 ವಯಸ್ಸಿನ ಅಜ್ಜಿಯೊಬ್ಬರು ಮಹಾಮಾರಿ ಕೊರೋನಾವನ್ನು ಗೆದ್ದು ಯುವ ಜನತೆಗೆ ಮಾದರಿ ಯಾಗಿದ್ದಾರೆ.
ಹೌದು ಆತ್ಮಸ್ಥೈರ್ಯವಿದ್ದರೆ ಏನಾದರೂ ಗೆಲ್ಲಬ ಹುದು ಸಾಧಿಸಬಹುದು ಎನ್ನೊದಕ್ಕೆ ಈ 97ರ ಇಳಿವ ಯಸ್ಸಿನಲ್ಲಿರುವ ವಯೋವೃದ್ದ ಅಜ್ಜಿಯೇ ಸಾಕ್ಷಿಯಾ ಗಿದ್ದಾರೆ. ಕೊರೋನಾ ಗೆದ್ದು ಬರಬಹುದೆಂಬುದನ್ನು ಈ ಅಜ್ಜಿಯೊಬ್ಬರು ನಮಗೆ ತೋರಿಸಿಕೊಟ್ಟಿದ್ದಾರೆ. ರಾಯಚೂರಿನ ಮಹಾವೀರ ವೃತ್ತದ ಸಮೀಪದ ನಿವಾಸಿ ಸಜಿನಿಬಾಯಿ(97) ಕೊರೋನಾವನ್ನು ಯಶ ಸ್ವಿಯಾಗಿ ಎದುರಿಸಿ ಗುಣಮುಖರಾಗಿರುವ ವೃದ್ಧೆಯಾಗಿ ನಮ್ಮ ಮುಂದೆ ಈ ಪ್ರೇರಣೆಯಾಗಿದ್ದಾ ರೆ. ಏ.20ರಂದು ಅವರ ಆರೋಗ್ಯದಲ್ಲಿ ಏರುಪೇರಾ ಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ದ್ದರು.
ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು.ಇದರಿಂದಾಗಿ ಕುಟುಂಬಸ್ಥ ರು, ಆಪ್ತರು ಸಾಕಷ್ಟು ಆತಂಕಕ್ಕೊಳಾಗಿದ್ದರು.ಆದರೆ ವೃದ್ಧೆ ಸಜಿನಿಬಾಯಿ ಆತ್ಮವಿಶ್ವಾಸ ವೈದ್ಯರಿಂದ ನಿರಂ ತರ ಚಿಕಿತ್ಸೆಯ ಫಲವಾಗಿ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಬುಧುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಈ ಬಗ್ಗೆ ಮಾತನಾಡಿರುವ ವೈದ್ಯ ಡಾ.ಬಸವರಾಜ ಎಂ. ಪಾಟೀಲ್ ವೃದ್ಧೆಯ ಆತ್ಮಸ್ಥೈರ್ಯವನ್ನು ಶ್ಲಾಘಿಸಿ ದ್ದಾರೆ. ಅಲ್ಲದೇ ಕೊರೋನಾ ಬಗ್ಗೆ ಸಾರ್ವಜನಿಕರು ಅನಗತ್ಯವಾದ ಆತಂಕ ಪಡದೇ, ಸೋಂಕು ತಗುಲಿ ದಾಗ ದೃತಿಗೆಡದೇ ವೈದ್ಯಕೀಯ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ. ಹೀಗಾಗಿ ಈಒಂದು ಅಜ್ಜಿಯನ್ನು ನೋಡತಾ ಇದ್ದರೆ ನಾವು ಕೂಡಾ ಯಾವುದಕ್ಕೂ ಹೆದರಿಕೊಳ್ಳದೇ ಧೈರ್ಯವಾಗಿದ್ದರೆ ಏನನ್ನಾದರೂ ಗೆಲ್ಲಬಹುದು ಸಾಧಿಸಬಹುದು ಎಂಬೊದಕ್ಕೆ ಇವರೇ ಪ್ರೇರಣೆ ಯಾಗಿದ್ದು ಹೀಗಾಗಿ ಈ ಒಂದು ಮಹಾಮಾರಿಗೆ ಯಾರೂ ಕೂಡಾ ಹೆದರಿಕೊಳ್ಳದೇ ಭಯವನ್ನು ಪಟ್ಟುಕೊಳ್ಳದೇ ಎಚ್ಚರಿಕೆಯಿಂದ ಇರಬೇಕು ಕಾಳಜಿ ಇರಲಿ ಭಯ ಬೇಡ.