ಧಾರವಾಡ –
ಅಲ್ಪ ಟೆಂಡರ್ ಪಡೆದು ಲಕ್ಷ ಲಕ್ಷ ಬಾಡಿಗೆ ಪಡೆಯುವರಿಗೆ ನೊಟೀಸ್ ನೀಡಿದ ಇಲಾಖೆ ನೊಟೀಸ್ ನೀಡಿದ ಬೆನ್ನಲ್ಲೇ ಹೊಸದೊಂದು ತಂತ್ರಗಾರಿಕೆ ಏನು ಗೊತ್ತಾ…..ಹೊಸ ಪ್ಲಾನ್ ಕೇಳಿದ್ರೆ ಶಾಕ್ ಆಗುತ್ತದೆ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಕಡಿಮೆ ದರಕ್ಕೆ ಟೆಂಡರ್ ನ್ನು ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದಾರೆ. ಅಲ್ಪ ಹಣಕ್ಕೆ ಟೆಂಡರ್ ತಗೆದುಕೊಂಡು ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ಪಡೆದ ಹಣಕ್ಕಿಂತ ನಾಲ್ಕೈದು ಪಟ್ಟು ದುಬಾರಿಯಾಗಿ ಒಂದೊಂದು ಅಂಗಡಿಗೆ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಕೊಟ್ಟು ವಸೂಲಿ ಮಾಡುತ್ತಿದ್ದಾರೆ.
ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ನ್ಯೂಸ್ ವರದಿ ಮೂಲಕ ಬೆಳಕನ್ನು ಚೆಲ್ಲಿತು.ಈ ಒಂದು ಸುದ್ದಿ ಸಂತೆಯ ನಿರಂತರ ವರದಿಗಳಿಗೆ ಸ್ಪಂದಿಸಿ ಬಾಡಿಗೆ ದಾರರಿಂದ ಪೂರ್ಣವಾದ ಮಾಹಿತಿಯನ್ನು ಪಡೆದು ಕೊಂಡಿರುವ ಡಿಸಿಯವರು ತಪ್ಪು ಕಂಡು ಬಂದ ಹಿನ್ನಲೆ ಯಲ್ಲಿ ಟೆಂಡರ್ ಪಡೆದುಕೊಂಡವರಿಗೆ ನೊಟೀಸ್ ನೀಡಿದ್ದಾರೆ.
ನೊಟೀಸ್ ನೀಡಿ ಏಳು ದಿನಗಳ ಒಳಗಾಗಿ ನೊಟೀಸ್ ಗೆ ಉತ್ತರವನ್ನು ನೀಡುವಂತೆ ಜೊತೆಗೆ ಬಾಡಿಗೆ ಪಡೆಯುತ್ತಿ ರುವ ಕುರಿತಂತೆ ಲಿಖಿತವಾದ ದಾಖಲೆಯನ್ನು ಬಾಡಿಗೆ ದಾರರಿಂದ ನೀಡುವಂತೆ ಡಿಸಿಯವರು ಸೂಚನೆ ನೀಡಿ ದ್ದಾರೆ ಇದೇನು ಸರಿಯಾದ ವಿಚಾರ ಆದರೆ ಸಧ್ಯ ಟೆಂಡರ್ ಪಡೆದವನಿಗೆ ದೊಡ್ಡದೊಂದು ತಲೆನೋವಿನ ವಿಚಾರ ಶುರವಾಗಿದೆ
ಹೌದು ಹೊಟೇಲ್ ಗೆ ಮಾಡಿ ಕೊಟ್ಟಿರುವ ಬಾಂಡ್ ನಲ್ಲಿ ದಾಖಲೆಯಲ್ಲಿ ಬಾಡಿಗೆ ಅಂತಾ 30 ಸಾವಿರ ಇದೆ ಬಾಡಿಗೆ ತಗೆದುಕೊಳ್ಳುತ್ತಿರುವುದು ಎರಡೂವರೆ ಲಕ್ಷ ಸಧ್ಯ ಇದನ್ನು ಕಡಿಮೆ ಮಾಡಲಾಗಿದೆ.ಇನ್ನೂಳಿದಂತೆ ಧಾರವಾಡ ಫೇಮಸ್ ಪೇಢಾ ಮಳಿಗೆಗೆ ಯಾವುದೇ ದಾಖಲೆ ಇಲ್ಲ ಬಾಡಿಗೆ ಮಾತ್ರ ಎರಡು ಲಕ್ಷ 40 ಸಾವಿರ,ಇನ್ನೂ ಇನ್ನೇರೆಡು ಬೇಕರಿಗಳಿಗೆ 70 ಸಾವಿರ ಬಾಡಿಗೆ ಇದೆ
ಇವುಗಳಿಗೊ ಕೂಡಾ ಬಾಂಡ್ ಇಲ್ಲ ಬಾಡಿಗೆ ವಸೂಲಿಯಲ್ಲಿ ಮಾತ್ರ ಲೆಕ್ಕ.ಹೀಗಿರುವಾಗ ಸಧ್ಯ ಟೆಂಡರ್ ತಗೆದುಕೊಂಡಿರುವವರು ಬಾಂಡ್ ಮಾಡಿಸಲು ಹೊಸದೊಂದು ಪ್ಲಾನ್ ಮಾಡ್ತಾ ಇದ್ದು ದಾಖಲೆಗಳೊಂದಿಗೆ ನಾಳೆ ನಿಮ್ಮ ಸುದ್ದಿ ಸಂತೆಯಲ್ಲಿ ನಿರೀಕ್ಷಿಸಿ…..
ಸುದ್ದಿ ಸಂತೆ ನ್ಯೂಸ್ ಧಾರವಾಡ……