ಕಲಬುರಗಿ –
ಖಾಸಗಿ ಶಾಲೆಯ ಮಾಲೀಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.ಕಲಬುರಗಿಯ ವಿವೇಕಾನಂದ್ ನಗರದ ನಿವಾಸಿ ಶಂಕರ್ ಬಿರಾದರ್(43) ಮೃತ ದುರ್ದೈವಿಯಾಗಿದ್ದಾರೆ. ಸೇಡಂ ತಾಲೂಕಿನಲ್ಲಿ ಖಾಸಗಿ ಶಾಲೆ ಹೊಂದಿರುವ ಶಂಕರ್ ಬಿರಾದರ್, ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ವಿಷ ಸೇವನೆ ಮಾಡಿ ಸಾವಿಗೆ ಶರಣಾಗಿದ್ದಾರೆ.

ಸಾಲಭಾದೆ ಮತ್ತು ಸಾಲಗಾರರ ಕಿರುಳಕ್ಕೆ ಬೇಸತ್ತ ಶಂಕರ್ ಬಿರಾದಾರ್ ಸಾವಿನ ಮನೆಯ ಕದ ತಟ್ಟಿದ್ದಾರೆ. ಖಾಸಗಿ ಶಾಲೆ ನಡೆಸಲು ಸಾಲ ಮಾಡಿಕೊಂಡಿದ್ದರು. ಸಾಲ ಪಾವತಿಸಿಲ್ಲ ಎಂದು ಸಾಲಗಾರರು ಶಾಲಾ ಬಸ್ ಗಳನ್ನು ಸೀಜ್ ಮಾಡಿದ್ದರು. ಇದರಿಂದ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಕುರಿತಂತೆ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಂಕರ್ ಬಿರಾದರ್ ಸಾವಿನ ಬಗ್ಗೆ ಮತ್ತೊಂದು ಖಾಸಗಿ ಶಾಲೆಯ ಮಾಲೀಕ ಬಸವರಾಜ್ ದಿಗ್ಗಾವಿ ಎಂಬುವವರು ಮಾಜಿ ಸಿಎಂ ಕುಮಾರಸ್ವಾಮಿ ಬಳಿ ಅಳಲು ತೋಡಿಕೊಂಡಿದ್ದಾರೆ.ಒಟ್ಟಾರೆ ಏನೇ ಆಗಲಿ ಸಾಲಕ್ಕೆ ಹೆದರಿ ಹೀಗೆ ಮಾಡಿಕೊಂಡಿದ್ದು ವಿಷಾದದ ಸಂಗತಿಯಾಗಿದೆ.