ಧಾರವಾಡ –
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಧಾರವಾಡ ಹಾಗೂ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆ ಟಿ ಸಿ ಡಬ್ಲ್ಯೂ ಧಾರವಾಡ ಇವರ ಸಂಯುಕ್ತ ಆಶ್ರಯ ದಲ್ಲಿ ಶಾಲಾ ಅಂಗಳದಲ್ಲಿ ಶನಿವಾರದ ಸಾಹಿತಿ ಸಾಂಸ್ಕೃತಿಕ ಸಂಭ್ರಮ ಎಂಬ ವಿಶೇಷ ಕಾರ್ಯ ಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಗಿರೀಶ್ ಪದಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಧಾರವಾಡ ಶಹರ, ಶ್ರೀ ಕೆ ಎಚ್ ನಾಯಕ್ ಹಿರಿಯ ಮಕ್ಕಳ ಸಾಹಿತಿಗಳು,ಶ್ರೀಮತಿ ನಳಿನಿ ಭೀಮಪ್ಪ ಲೇಖಕರು ಹಾಗೂ ಶ್ರೀಮತಿ ಎಲ್ಎಸ್ ಕಟ್ಟಿಮನಿ ಪ್ರಧಾನ ಗುರುಮಾತೆಯರು ಸರ್ಕಾರಿ ಮಾದರಿ ಶಾಲೆ ಟಿ ಸಿ ಡಬ್ಲ್ಯೂ ಧಾರವಾಡ ಭಾಗ ವಹಿಸಿ ಮಕ್ಕಳಿಗೆ ಲೇಖನ ಪತ್ರಿಕೆ ಬರಹ ಓದು ಇವುಗಳ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾರ್ಗ ದರ್ಶನ ನೀಡಿದರು. ಶ್ರೀಮತಿ ಗಂಗಾ ಕಾಳೆನ ಇವರ ತಂಡದಿಂದ ಕಳರಿ ಪಯಟ್ ಪ್ರದರ್ಶನ ಜರುಗಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಗಾಯನ ಪ್ರದರ್ಶನ ಜರುಗಿತು. ಕಾರ್ಯಕ್ರಮ ದಲ್ಲಿ ಟಿಸಿಡಬ್ಲ್ಯೂ ಕನ್ನಡ ಶಾಲೆಯ ಎಲ್ಲಾ ಗುರು ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರಿ ವೈಷ್ಣವಿ ಪತ್ತಾರ್ ವಹಿಸಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಕುಮಾರಿ ಶಾಪಿಂಗ್ ಕಲಾದಗಿ ವಿದ್ಯಾರ್ಥಿನಿ ನಡೆಸಿಕೊಟ್ಟರು. ವಂದನಾರ್ಪಣೆ ಯನ್ನು ಕುಮಾರಿ ಚೈತ್ರ ಮುತ್ನಾಳ ನಡೆಸಿಕೊ ಟ್ಟಳು.
ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾ ಘಟಕದ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂಜೀವ್ ಧುಮಕನಾಳ ಇವರು ವಹಿಸಿಕೊಂಡಿದ್ದರು.
ಸುದ್ದಿ ಸಂತೆ ನ್ಯೂಸ್…..