ಬೆಂಗಳೂರು –
ಶಾಲೆಯ ಮುಖ್ಯೋಪಾಧ್ಯಾಯ ರ ಹೆಸರು ಸೇರಿದಂತೆ ಹಲವರ ಹೆಸರನ್ನು ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ರೇಲ್ವೆಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೌದು ನಗರದ ಖಾಸಗಿ ಶಾಲೆ ಯೊಂದರಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೊ ಬ್ಬಳು ಪ್ರಾಂಶುಪಾಲರು ಸಹಿತ ಕೆಲವರ ವಿರುದ್ಧ ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ.
ನಗರದ ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಈ ಒಂದು ಘಟನೆ ನಡೆದಿದೆ.ಟಿ. ದಾಸರಹಳ್ಳಿ ನಿವಾಸಿ ಕೆ.ಎಸ್.ರಮ್ಯಾ ಮೂರ್ತಿ (15) ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ.ಆಕೆಯ ತಂದೆ ಪೇಜ್ ಡಿಸೈ ನರ್ ಆಗಿದ್ದು,ತಾಯಿ ಶಿಕ್ಷಕಿಯಾಗಿದ್ದಾರೆ.ಐದಾರು ತಿಂಗಳ ಹಿಂದೆ ರಮ್ಯಾ ಶಾಲೆಗೆ ಸ್ನ್ಯಾಕ್ಸ್ ತೆಗೆದುಕೊಂಡು ಹೋಗಿದ್ದು ಅದಕ್ಕೆ ಆಡಳಿತ ಮಂಡಳಿ ಆಕ್ಷೇಪಿಸಿ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು.ಅದರಿಂದ ಬೇಸರಗೊಂಡ ಆಕೆಯ ತಾಯಿಯು ಶಾಲೆ ವಿರುದ್ಧ ಮಾನವ ಹಕ್ಕುಗಳಿಗೆ ದೂರು ನೀಡಿದ್ದರು.
ಅದೇ ವಿಚಾರದಲ್ಲಿ ಪ್ರಾಂಶುಪಾಲರು ಸಹಿತ ಕೆಲವರು ಆಕೆಗೆ ಕಿರುಕುಳ ನೀಡುತ್ತಿದ್ದು ಡೆತ್‌ನೋಟ್‌ನಲ್ಲಿ ಈ ಕುರಿತಂತೆ ಬಾಲಕಿ ಉಲ್ಲೇಖವನ್ನು ಮಾಡಿದ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೂ ಮೊದಲು ಡೆತ್‌ನೋಟ್ ಬರೆದಿದ್ದು, ಅದರಲ್ಲಿ “I hate you principal’ ಹಾಗೂ ಕೆಲವು ವಿದ್ಯಾರ್ಥಿಗಳ ಹೆಸರನ್ನು ಉಲ್ಲೇಖಿಸಿ,“ಎಲ್ಲರನ್ನು ವಿರೋಧಿಸುತ್ತೇನೆ’ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ