ACB ಬಲೆಗೆ ಬಿದ್ದ ಮೂವರು ಸರ್ಕಾರಿ ಅಧಿಕಾರಿಗಳು – 80 ಸಾವಿರ ರೂಪಾಯಿಗೆ ಆಸೆ ಬಿದ್ದು ಜೈಲು ಸೇರಿದ ಮೂವರು…..

ಮಂಡ್ಯ –

ಕೈ ತುಂಬಾ ಸಂಬಳವಿದ್ದರೂ ಮತ್ತೆ ಸಾವಿರಾರು ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೌದು ಕಾಮಗಾರಿ ಮಾಡಿದ್ದ ಬಿಲ್ ಪಾವತಿ ಮಾಡುವುದಕ್ಕೆ ಗುತ್ತಿಗೆದಾರನಿಂದ ಅಧಿಕಾರಿಗಳು ಲಂಚ ಪಡೆಯು ತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಮೂವರು ಅಧಿಕಾರಿಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ.ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದ(KRS)ಕಾವೇರಿ ನೀರಾವರಿ ನಿಗಮದ ಕಛೇರಿಯಲ್ಲಿ ಇಂದು ಸಂಜೆ ‌ಗುತ್ತಿಗೆದಾರ ಸಚಿನ್ ಕೃಷ್ಣಮೂರ್ತಿ 1.50 ಲಕ್ಷ ರೂಪಾಯಿ ಮೊತ್ತದ ಕಾಮಗಾರಿ ನಡೆಸಿದ್ದರು.

ಆ ಕಾಮಗಾರಿಯ ಬಿಲ್ ಪಾವತಿ ಮಾಡಲು ಅಕೌಂಟ್ಸ್ ಸೂಪರಿಟೆಂಡೆಂಟ್ ಕರೀಗೌಡ, ಲೆಕ್ಕಾಧಿಕಾರಿ ರಾಮಚಂದ್ರು, ಎಫ್ ಡಿ ಎ ಸುರೇಶ್ ಎಂಬುವವರು ಸಚಿನ್ ಕೃಷ್ಣಮೂರ್ತಿ ಅವರಿಂದ ಮೂವರು ಅಧಿಕಾರಿಗಳು 8000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಗುತ್ತಿಗೆ ದಾರ ಸಚಿನ್ ಕೃಷ್ಣಮೂರ್ತಿ ಅಧಿಕಾರಿಗಳಿಗೆ ಲಂಚ ನೀಡುವಾಗ ಮಂಡ್ಯ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ಎಂ, ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಸಿಬ್ಬಂದಿ ಗಳಾದ ವೆಂಕಟೇಶ್, ಮಹೇಶ್, ಕುಮಾರ್ ದಾಳಿ ಮಾಡಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.ಎಸಿಬಿ ಅಧಿಕಾರಿಗಳು ಮೂವರನ್ನು ಕಛೇರಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸಿ ನ್ಯಾಯಾಧೀಶರ ಎದುರು ಹಾಜರು ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

Leave a Reply

Your email address will not be published. Required fields are marked *

error: Content is protected !!
%d bloggers like this: