ಬೆಂಗಳೂರು –
ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಹಾರಾ,ತುರಾಯಿ ನಿಷೇಧವನ್ನು ಮಾಡಿ ನಂತರ ಗಾಢ್ ಆಫ್ ಆನರ್ ನ್ನು ಬೇಡ ಎಂದು ಸೂಚಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ.ಹೌದು ಇನ್ನು ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆಯನ್ನು ನೀಡಬಾರ ದೆಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ತಾವು ಮನೆಯಿಂದ ಹೊರಡುವಾಗ ಇಲ್ಲವೇ ಅಧಿಕೃತ ಕಾರ್ಯಕ್ರಮಕ್ಕೆ ಬರುವ ಸಂದರ್ಭದಲ್ಲಿ ನನ್ನ ಭದ್ರತೆಗಾಗಿ ಝೀರೊ ಟ್ರಾಫಿಕ್ ವ್ಯವಸ್ಥೆ ನೀಡಬಾರದು.ಸಾರ್ವಜನಿಕರಿಗೆ ಕಿರಿಕಿರಿಯಾಗುವು ದನ್ನು ತಪ್ಪಿಸಬೇಕೆಂದು ಸೂಚಿಸಿದ್ದಾರೆ.

ನಾನು ಸಾಮಾನ್ಯ ಪ್ರಜೆಯಂತೆ ವಾಹನದಲ್ಲಿ ಸಂಚರಿಸುತ್ತೇನೆ.ನನಗೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ.ಹಿರಿಯ ಅಧಿಕಾರಿಗಳು ತಕ್ಷಣವೆ ಸಂಬಂಧಪಟ್ಟವರಿಗೆ ಸೂಚನೆ ಕೊಡಬೇಕೆಂದು ಸಿಎಂ ನಿರ್ದೇಶನ ನೀಡಿದ್ದಾರೆ.