ನವದೆಹಲಿ –
ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದ ದೇಶದ ಜನತೆಗೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ತುಸು ನೆಮ್ಮದಿಯನ್ನು ನೀಡಿದ್ದು ಪೆಟ್ರೊಲ್ ಡಿಸೇಲ್ ಬೆಲೆ ಏರಿಕೆಯನ್ನು ಕಡಿಮೆ ಮಾಡಲಾಗಿದ್ದು ಇದರ ಬೆನ್ನಲ್ಲೇ ಈಗ ಮತ್ತೊಂದು ಪ್ರಮುಖ ದಿನ ಬಳಕೆಯ ವಸ್ತುವಿನ ಬೆಲೆ ಯನ್ನು ಇಳಿಕೆ ಮಾಡಲಾಗಿದೆ.ಹೌದು ದೇಶದಲ್ಲಿ ಅಬಕಾರಿ ಸುಂಕ ಕಡಿತ ಮತ್ತು ಅನೇಕ ರಾಜ್ಯಗಳಲ್ಲಿ ವ್ಯಾಟ್ ಕಡಿತದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಈಗಾಗಲೇ ಇಳಿಕೆಯಾ ಗಿದೆ.ಇದರ ಬೆನ್ನಲ್ಲೇ ದೇಶದ ಜನತೆಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಅಡುಗೆ ಎಣ್ಣೆ ದರವನ್ನು ಇಳಿಕೆ ಮಾಡಲಾಗಿದೆ.ಹೌದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಯ ಕಾರ್ಯದರ್ಶಿ ಸುಧಾಂಶು ಪಾಂಡೆ, ಪತ್ರಿಕಾಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಅಡುಗೆ ಎಣ್ಣೆ ದರ ಪ್ರತಿ ಕೆಜಿಗೆ 20 ರೂ.ವರೆಗೂ ದರ ಕಡಿಮೆಯಾಗಿದೆ.
ಖಾದ್ಯ ತೈಲ ಬೆಲೆಗಳು ಸಾಕಷ್ಟು ಗಣನೀಯವಾಗಿ ಕುಸಿದಿವೆ ಹಲವು ಸ್ಥಳಗಳಲ್ಲಿ 20 ರೂ.18 ರೂ.10 ರೂ. 7 ರೂ.ಗಳಷ್ಟು ಇಳಿಕೆಯಾಗಿದೆ.ತಾಳೆ ಎಣ್ಣೆ ಕಡಲೆಕಾಯಿ, ಸೋಯಾಬೀನ್,ಸೂರ್ಯಕಾಂತಿ ಮತ್ತು ಎಲ್ಲಾ ಪ್ರಮುಖ ಎಣ್ಣೆಗಳ ಬೆಲೆ ಕುಸಿತ ಕಂಡಿದೆ ಎಂದು ಹೇಳಿದರು. ಇದರೊಂದಿಗೆ ಮತ್ತೊಂದು ಸಿಹಿ ಸುದ್ದಿ ದೇಶದ ಜನತೆಗೆ ಸಿಕ್ಕಿದೆ.























