ಬೆಂಗಳೂರು –
2022-23ನೇ ಸಾಲಿನ ಅನುದಾನಿತ ಪ್ರೌಢಶಾಲೆಗಳಲ್ಲಿನ ಬೋಧಕ,ಬೋಧಕೇತರ ಸಿಬ್ಬಂದಿ ವರ್ಗದವರ ವರ್ಗಾ ವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಅನುದಾನಿತ ಪ್ರೌಢ ಶಾಲಾ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ ನ್ನು ರಾಜ್ಯ ಸರ್ಕಾರ ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರೌಢ ಶಿಕ್ಷಣದ ನಿರ್ದೇಶ ಕರು ಸುತ್ತೋಲೆ ಹೊರಡಿಸಿದ್ದು ಅನುದಾನಿತ ಪ್ರೌಢಶಾಲಾ ಶಿಕ್ಷಕರನ್ನು ಅದೇ ಸಂಸ್ಥೆಯ ಇತರೆ ಅನುದಾನಿತ ಪ್ರೌಢ ಶಾಲೆಗಳಿಗೆ ಅಥವಾ ಒಂದು ಸಂಸ್ಥೆಯ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರನ್ನು ಇನ್ನೊಂದು ಸಂಸ್ಥೆಯ ಅನುದಾ ನಿತ ಪ್ರೌಢಶಾಲೆಗಳ ಅನುದಾನಿತ ಹುದ್ದೆಗೆ ವರ್ಗಾಯಿಸಲು ಆಯಾ ಸಂಸ್ಥೆಗಳು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕಾಗಿರುವುದರಿಂದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗಾವಣೆಯನ್ನು ಶೈಕ್ಷಣಿಕ ಹಿತದೃಷ್ಠಿ ಮತ್ತು ಸಿಬ್ಬಂದಿ ವರ್ಗದವರ ಹಿತದೃಷ್ಠಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರತಿ ಶೈಕ್ಷಣಿಕ ವರ್ಷ ಪ್ರಾರಂ ಭಕ್ಕೆ ಮೊದಲೇ ಪ್ರಸ್ತಾವನೆ ಸಲ್ಲಿಸಲು ಅನುಮೋದನೆ ಪಡೆದುಕೊಳ್ಳಲು ತಿಳಿಸಲಾಗಿದ್ದು ವೇಳಾಪಟ್ಟಿ ಈ ಕೆಳಗಿನಂತೆ ಇದೆ