ಹುಬ್ಬಳ್ಳಿ –
ರಸಗೊಬ್ಬರದ ಬೆಲೆ ಹೆಚ್ಚಳ ವಿರೋಧಿಸಿ ಹುಬ್ಬಳ್ಳಿಯಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಲಿದೆ ಹೌದು ರೈತರಿಗೆ ಬೆಲೆ ಏರಿಕೆ ಬೇಕಾಗಿಲ್ಲ ನ್ಯಾಯಕ್ಕಾಗಿ ಹೋರಾಡಿ ಎಂಬ ಸಂದೇಶ ದೊಂದಿಗೆ ಈ ಒಂದು ಹೋರಾಟವು ನಗರದಲ್ಲಿ ನಡೆಯಲಿದೆ
ರೈತರು ಈಗಾಗಲೇ ಬರ, ಮಳೆ ಕೊರತೆ, ಸಾಲಬಾಧೆ ಯಿಂದ ಸಂಕಷ್ಟದಲ್ಲಿರುವಾಗ ಕೇಂದ್ರದ ಬಿಜೆಪಿ ಸರ್ಕಾರ ಪ್ರಮುಖ ರಸಗೊಬ್ಬರಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಿದೆ. ಮತ್ತು ಯೂರಿಯಾ ಬೆಲೆಗಳ ಏರಿಕೆ ರೈತರಿಗೆ ಮತ್ತಷ್ಟು ಹೊರೆ ತಂದಿದೆ.
ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸುತ್ತಿದ್ದು ತಕ್ಷಣವೇ ಬೆಲೆ ಕಡಿತ ಮಾಡುವಂತೆ ಆಗ್ರಹಿಸುತ್ತದೆ ಎಂದು ಯುವ ಘಟಕದ ಅಧ್ಯಕ್ಷ ಅರ್ಜುಲ ಪಾಟೀಲ್ ಹೇಳಿದ್ದಾರೆ
ಇಂದು ಸಮಯ: ಬೆಳಿಗ್ಗೆ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭ ಗೊಂಡು ತಹಶಿಲ್ದಾರ ಕಚೇರಿ ವರೆಗೆ ಸಾಗಲಿದೆ.ರೈತ ಪರ ಈ ಒಂದು ಹೋರಾಟದಲ್ಲಿ ಹುಬ್ಬಳ್ಳಿ-ಧಾರವಾಡ ನಗರದ ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ರೈತರ ಪರ ಹೋರಾಡೋಣ – ಬೀದಿಗಳಲ್ಲಿ ನಮ್ಮ ಧ್ವನಿ ಎತ್ತೋಣ ಎಂದು ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅರ್ಜುನ್ ಪಾಟೀಲ ಕರೆ ನೀಡಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..