ಹುಬ್ಬಳ್ಳಿ –
ದುರ್ಗಾದೇವಿಯ ನವರಾತ್ರಿಯ ಉತ್ಸವದಲ್ಲಿ ಪಾಲ್ಗೊಂಡ ಅರ್ಜುನ ಪಾಟೀಲ್ – ನವರಾತ್ರಿ ಉತ್ಸವ ಸಮಿತಿಯಿಂದ ಅರ್ಜುನ ಪಾಟೀಲ್ ಗೆ ಸನ್ಮಾನ ಗೌರವ…..
ಎಲ್ಲೇಡೆ ನವರಾತ್ರಿ ಹಬ್ಬದ ಸಡಗರ ಸಂಭ್ರಮ ಜೋರಾಗಿದ್ದು ಇನ್ನೂ ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿ ಯಲ್ಲೂ ಕೂಡಾ ನವರಾತ್ರಿ ದಸರಾ ಹಬ್ಬದ ಆಚರಣೆ ಜೋರಾಗಿದೆ.ಈ ಮಧ್ಯೆ ನಗರದ ಹಲವೆಡೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಹುಬ್ಬಳ್ಳಿಯ ಶರಾವತಿ ನಗರದಲ್ಲಿ ದುರ್ಗಾದೇವಿ ನವರಾತ್ರಿ ಉತ್ಸವ ಸಮಿತಿ ಕಾರ್ಯಕ್ರಮವನ್ನು ಆಯೋಜಿಸಿತ್ತು
ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅರ್ಜುನ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇವರಿಗೆ ಸಮಿತಿಯಿಂದ ಆತ್ಮೀಯವಾದ ಸ್ವಾಗತವನ್ನು ಕೋರಲಾ ಯಿತು ವೇದಿಕೆಯ ಮೇಲೆ ಅರ್ಜುನ ಪಾಟೀಲ್ ಅವರಿಗೆ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳು, ಸ್ಥಳೀಯ ಗಣ್ಯರು ಹಾಗೂ ಹಲವಾರು ಭಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..