ನಿಡಗುಂದಿ –
ರಾಜ್ಯದಿಂದ ಹೊರ ರಾಜ್ಯಕ್ಕೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ರಾಯಚೂರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.ಹೌದು ಲಾರಿಯೊಂದಿಗೆ ತಾಲೂಕಾಡಳಿತ ಹಾಗೂ ಪೊಲೀಸರು ಜಂಟಿಯಾಗಿ ವಶಪಡಿಸಿಕೊಂಡ ಘಟನೆ ತಾಲೂಕಿನ ಯಲಗೂರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ತಮಿಳುನಾಡು ಮೂಲದ ಲಾರಿಯಲ್ಲಿ ಲಿಂಗಸೂರದ ಅಂಜನಾದ್ರಿ ಟ್ರೇಡರ್ಸ್ ನಿಂದ ಪಡಿತರ ಅಕ್ಕಿಯುಳ್ಳ ಚೀಲ ತೆಗೆದು ಕೊಂಡು ಗುಜರಾತ್ ರಾಜ್ಯದ ಜೆತಲಪುರಕ್ಕೆ ಲಾರಿ ಹೊರ ಟಿತ್ತು.ಲಾರಿ ಚಾಲಕ ನಾಮಕಲ್ ಜಿಲ್ಲೆಯ ಪರಮತಿ ವೆಲ್ಲೂರ ತಾಲೂಕಿನ ಕೊಡಚ್ಚೇರ ಗ್ರಾಮದ ಸರವಣ ಎಸ್ ಸಂಗೋಡನನನ್ನು ಬಂಧಿಸಲಾಗಿದ್ದು ಲಾರಿಯನ್ನು ನಿಡ ಗುಂದಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾರಿಯಲ್ಲಿ 575 ಚೀಲಗಳಲ್ಲಿ ಇದ್ದ 28,750 ಕೆಜಿ ಅಕ್ಕಿ ಯನ್ನು ವಶಪಡಿಸಿಕೊಳ್ಳಲಾಗಿದ್ದು ಒಟ್ಟು ಮೌಲ್ಯ 8,45, 250 ರೂ.ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಅಕ್ಕಿ ಸರ್ಕಾರದ ನಾನಾ ಯೋಜನೆಗೆ ಹಂಚಿಕೆಯಾದ ಪಡಿತರ ಅಕ್ಕಿಯಾಗಿದೆ
ತಹಶೀಲ್ದಾರ್ ಸತೀಶ ಕೂಡಲಗಿ ಮಾರ್ಗದರ್ಶನದಲ್ಲಿ ಆಹಾರ ನಿರೀಕ್ಷಕ ಸಂಜಯ ಪಾಟೀಲ,ಲೋಕೇಶ ಕುಪ್ಪಸ್ತ, ಅಪ್ಪಾಸಾಹೇಬ ಘಂಟಿ,ಪೊಲೀಸ್ ಸಿಬ್ಬಂದಿಗಳು ಈ ಒಂದು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.ಆಹಾರ ನಿರೀಕ್ಷಕ ಸಂಜಯ ಪಾಟೀಲ ಈ ಕುರಿತು ಪಟ್ಟಣದ ಠಾಣೆ ಯಲ್ಲಿ ದೂರನ್ನು ದಾಖಲಿಸಿದ್ದಾರೆ.