ಹುಬ್ಬಳ್ಳಿ ಧಾರವಾಡ –
ಗಬ್ಬೆದ್ದು ನಾರುತ್ತಿದೆ BRTS…..ಹತ್ತು ದಿನಗಳಿಂದಲೂ ಕೆಟ್ಟ ವಾಸನೆ ಹೊಡೆಯುತ್ತಿದ್ದರು ಕಣ್ತೇರೆದು ನೋಡುತ್ತಿಲ್ಲ ಕಂಡು ಕಾಣದಂತೆ ಇದ್ದಾರೆ ಅಧಿಕಾರಿಗಳು…..ಹೈಟೇಕ್ ಸಾರಿಗೆಯಲ್ಲಿ ಇದೇಂಥಾ ವ್ಯವಸ್ಥೆ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡು ತ್ತಿರುವ BRTS ನಲ್ಲಿ ಅವ್ಯವಸ್ಥೆ ಆಗರವಾಗಿದೆ ಎನ್ನೊದಕ್ಕೆ ಸಧ್ಯ ನಿಲ್ದಾಣಗಳಲ್ಲಿ ಕಂಡು ಬರುತ್ತಿರುವ ಚಿತ್ರಣವೇ ಸಾಕ್ಷಿಯಾಗಿದೆ ಹೌದು ಈ ಹಿಂದೆ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಮಾಡುವವರು ಇಲ್ಲದ ಸಮಯ ದಲ್ಲಿ ಕಸದಿಂದ ತುಂಬಿ ನಿಲ್ದಾಣಗಳು ತುಂಬಿಕೊಂಡಿ ದ್ದವು
ಸಧ್ಯ ನಿಲ್ದಾಣಗಳಲ್ಲಿ ಇರುವ ಶೌಚಾಲಯಗಳು ಸ್ವಚ್ಚತೆ ಇಲ್ಲದೇ ಗಬ್ಬೇದ್ದು ನಾರುತ್ತಿರುವೆ ಹೌದು ಕಳೆದ ಹತ್ತು ದಿನಗಳಿಂದ BRTS ಬಸ್ ನಿಲ್ದಾಣಗಳಲ್ಲಿ ಇರುವ ಶೌಚಾಲಯಗಳ ಪರಸ್ಥಿತಿ ಅವ್ಯವಸ್ಥೆಯ ಆಗರವಾಗಿದೆ ಸ್ವಚ್ಚತೆ ಇಲ್ಲದೇ ಒಂದೇಡೆ ಗಬ್ಬೇದ್ದು ನಾರುತ್ತಿದ್ದರೆ ಮತ್ತೊಂದೆಡೆ ಇದರಲ್ಲಿಯೇ ಕೆಲ ಸಾರ್ವಜನಿಕರು ಅನಿವಾರ್ಯ ಪರಸ್ಥಿತಿ ಎಂಬಂತೆ ಶೌಚಾಲಯ ಉಪ ಯೋಗ ಮಾಡುತ್ತಿದ್ದಾರೆ
ನೀರು ಇಲ್ಲ ಸ್ವಚ್ಚತೆ ಇಲ್ಲ ಇದರ ನಡುವೆ ನಾರುತ್ತಿರುವ ಶೌಚಾಲಯಗಳು ಈ ಒಂದು ವಿಚಾರ ಕುರಿತಂತೆ ಸಾರ್ವಜನಿಕರು ಕೂಡಾ ದೂರು ನೀಡಿದ್ದಾರೆ ಮಾಹಿತಿ ಯನ್ನು ಕೂಡಾ ಮೇಲಾಧಿಕಾರಿಗಳಿಗೆ ನೀಡಿದ್ದಾರೆ ಆದರೆ ಏನು ಮಾಡೊದು ಕೇಳಿ ಕೇಳಲಾರದಂತೆ ಕಂಡು ಕಾಣ ದಂತೆ ಇದ್ದಾರೆ ಇಲಾಖೆಯ ಅಧಿಕಾರಿಗಳು
ಸಾರ್ವಜನಿಕರಿಗೆ ಬಸ್ ಚಾಲಕರಿಗೆ ಇಲಾಖೆಯ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕಾಗಿ ಈ ಒಂದು ಶೌಚಾಲಯಗಳನ್ನು ಮಾಡಲಾಗಿದೆ ಆದರೆ ಏನು ಮಾಡೊದು ಹೆಸರಿಗೆ ಮಾತ್ರ ಹೈಟೇಕ್ ಸಾರಿಗೆ ವ್ಯವಸ್ಥೆ ಒಳಗಡೆ ನೋಡಿದ್ರೆ ಎಲ್ಲವೂ ಅವ್ಯವಸ್ಥೆಯ ಆಗರ ಸಧ್ಯ ಚಿಗರಿ ಬಸ್ ನಿಲ್ದಾಣದಲ್ಲಿನ ಗಬ್ಬೇದ್ದು ನಾರುತ್ತಿರುವ ಶೌಚಾಲಯ. ದಿಂದಾಗಿ ಚಾಲಕರು ಸಾರ್ವಜನಿಕರು ಪರದಾಡುತ್ತಿದ್ದರೆ
ಇತ್ತ ನಮಗೇನು ಈ ಒಂದು ವಿಚಾರ ಗೊತ್ತೇ ಇಲ್ಲ ಎಂದುಕೊಂಡು ಅಧಿಕಾರಿಗಳಿದ್ದು ಇನ್ನಾದರೂ ಇತ್ತ ಕಣ್ತೇರೆದು ನೋಡಿ ಸಣ್ಣ ಅವ್ಯವಸ್ಥೆಯ ಸಮಸ್ಯೆಯನ್ನು ಸರಿ ಮಾಡ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ.