6 ಮತ್ತು 7 ನೇ ತರಗತಿ ಶಿಕ್ಷಕರ ವೈಯಕ್ತಿಕ ದಾಖಲೆ ನಿರ್ವಹಣೆ ಸ್ಥಗಿತ – PST ಶಿಕ್ಷಕ ಶಿಕ್ಷಕಿಯರ ಕಾರ್ಯನಿರತ ಚಳುವಳಿ ಪ್ರಾರಂಭ

ಧಾರವಾಡ –

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯಘಟಕ- ಧಾರವಾಡ ವತಿಯಿಂದ ರಾಜ್ಯಾದ್ಯಂತ ನಿರಂತರ ಚಳುವಳಿಗೆ ಕರೆ ನೀಡಿದೆ. ಸರ್ಕಾರ ಈಗಾಗಲೇ 1-7 ನೇ ತರಗತಿ ಬೋದಿಸುವ ಶಿಕ್ಷಕರುಗಳನ್ನು PST 1-5 ನೇ ತರಗತಿಗೆ ಸೀಮಿತಗೊಳಿಸಿದೆ.ಇದನ್ನು ವಿರೋದಿಸಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಸಿ ಅಂಡ್ ಆರ್ ನಿಯಮ ತಿದ್ದುಪಡಿ ಮಾಡಿ ಪದವಿ ಪಡೆದಿರುವ ಶಿಕ್ಷಕ ಶಿಕ್ಷಕಿಯರಿಗೆ ಸರ್ಕಾರ ಇದುವರೆಗೆ ನ್ಯಾಯ ನೀಡದೇ ಕಡೆಗಣಿಸಿದೆ ಆದ್ದರಿಂದ ಇಂದಿನಿಂದಲೇ
6 & 7 ನೇ ತರಗತಿ ಮಕ್ಕಳ ಬೋದನೆಗೆ ಸಂಬಂದಿಸಿದಂತೆ ಯಾವುದೇ ಶಿಕ್ಷಕರ ಶೈಕ್ಷಣಿಕ ದಾಖಲೆಗಳನ್ನು ಬರೆಯದೇ ಸ್ಥಗಿತಗೊಳಿಸುವ ಮೂಲಕ ಚಳುವಳಿ ಪ್ರಾರಂಬಿಸುತ್ತಿ ದ್ದೇವೆ.

ಆದರೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪಾಠ ವಂಚನೆ ಮಾಡದೇ ಪಾಠ ಬೋಧನೆ ಕೈಗೊಳ್ಳಲಾಗುವುದು.ಎಂದು ತೀರ್ಮಾನಿಸಿದೆ.ಈ ವಿಷಯ ಕುರಿತಂತೆ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಗಮನಕ್ಕೆ ತಂದು ಪ್ರಾರಂಬಿಸಲು ರಾಜ್ಯಾದ್ಯಂತ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಕರೆ ನೀಡಲಾಗಿದೆ.

ಈ ಚಳುವಳಿ ನಿರಂತರವಾಗಿದ್ದು GPT ಶಿಕ್ಷಕರಾಗಿ ಪರಿಗಣಿಸುವವರೆಗೆ ನಡೆಸಲಾಗುವುದು.ಎಲ್ಲ ಪದವೀಧರ ಶಿಕ್ಷಕ ಶಿಕ್ಷಕಿಯರು ಈ ಚಳುವಳಿಗೆ ಬೆಂಬಲಿಸಿ.ಒಗ್ಗಟ್ಟಾಗಿ ಶಾಂತಿಯುತ ಕರ್ತವ್ಯ ನಿರತ ಚಳುವಳಿ ಮಾಡೋಣ ಎಂದು ಡಾ. ಲತಾ. ಎಸ್. ಮುಳ್ಳೂರ ಸ0ಸ್ಥಾಪಕ ರಾಜ್ಯಾಧ್ಯಕ್ಷರು ಹೇಳಿದರು

ಶ್ರೀಮತಿ ಜ್ಯೋತಿ. H. ರಾಜ್ಯ ಪ್ರಧಾನ ಕಾರ್ಯದರ್ಶಿ
ರಾಜ್ಯ. ಜಿಲ್ಲಾ. ತಾಲೂಕು ಸಮಸ್ತ ಪದಾಧಿಕಾರಿಗಳು

Leave a Reply

Your email address will not be published. Required fields are marked *

error: Content is protected !!
%d bloggers like this: