ಹುಬ್ಬಳ್ಳಿ –
ಆಪರೇಷನ್ ಸಿಂಧೂರ ಕೈಗೊಂಡ ಭಾರತೀಯ ಸೈನಿಕರು ಗೆದ್ದು ಬರಲಿ ಎಂದು ವಿಶೇಷ ವಾದ ಪೂಜೆ ಆರಾಧನೆ ದೇಶದೆಲ್ಲೆಡೆ ನಡೆಯುತ್ತಿದ್ದು ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಂಡು ಬಂದಿತು ನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಈ ಒಂದು ವಿಶೇಷ ಪೂಜೆ ಮತ್ತು ಆರಾಧನೆ ಯನ್ನು ಮಾಡಲಾಯಿತು
ಪಹಲ್ಗಾಮ್
ಭಯೋತ್ಪಾದಕರ ದಾಳಿಯಲ್ಲಿ ಮನೆಯ ಸದಸ್ಯರನ್ನು ಕಳೆದುಕೊಂಡ ಹೆಣ್ಣುಮಕ್ಕಳ ಹಣೆಯಲ್ಲಿನ ಸಿಂಧೂರವೂ ಅಳಿಸಿಹೋಗಿದೆ. ಹೆಣ್ಣು ಮಕ್ಕಳ ಕುಂಕುಮ ಭಾಗ್ಯ ಕಸಿದ ಉಗ್ರರ ಹೇಯ ಕೃತ್ಯದ ವಿರುದ್ಧ ಸಿಡಿದೆದ್ದ ಭಾರತ ಇದೇ ಕಾರಣಕ್ಕೆ ಪಹಲ್ಲಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ ಪತ್ರಿದಾಳಿಗೆ ”ಆಪರೇಷನ್ ಸಿಂಧೂರ್” ಎಂದು ನಾಮಕರಣ ಮಾಡಿ ಪಾಕಿಸ್ತಾನದ ಉಗ್ರರ ಎದೆಯೊಳಗೆ ಭಾರತ ದೇಶದ ಸಿಂಧೂರದ ಗುಂಡು ನುಗ್ಗಿಸಿದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಗೋಕಾಕ ಅವರ ನೇತೃತ್ವದಲ್ಲಿ ಸಾಯಿ ಮಂದಿರದಲ್ಲಿ ಈ ಒಂದು ಕಾರ್ಯ ಮಾಡಲಾಯಿತು.ಪಾಕಿಸ್ತಾನದ ಒಟ್ಟು ಒಂಬತ್ತು ಸ್ಥಳಗಳಾದ ಬಹವಾಲ್ಪುರ್, ಮುರಿಡೈ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಗೊಟ್ ಮತ್ತು ಮುಜಫರಾಬಾದ್ ಮೇಲೆ ನಿಖರವಾದ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮತ್ತು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನ ಅಡಗು ತಾಣಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದ್ದು ಈ ಒಂದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಯುದ್ಧದ ಮುನ್ನುಡಿ ಇಷ್ಟು ಭಯಂಕರವಾಗಿದೆ ಅಂದ್ರೆ ಮುಂದೆ ಪಾಕಿಸ್ತಾನದ ನಕಾಶವನ್ನು ತೆಗಿಯುವಂತ ಸಂಕಲ್ಪ ಎಷ್ಟು ಭಯಂಕರಾಗಿರುತ್ತೆ ಅಂತ ಈಗ ಅರ್ಥವಾಗುತ್ತದೆ ಹಾಗಾಗಿ ಸುರಕ್ಷಿತವಾಗಿ ಗೆದ್ದು ಬಂದು ಭಾರತ ಮಡಿಲಲ್ಲಿ ಸೇರಲಿ ಅಂತ ನಮ್ಮ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಸತ್ಯ ಸಾಯಿಬಾಬಾ ಮಂದಿರದಲ್ಲಿ
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪೂಜೆಯನ್ನು ಸಲ್ಲಿಸಲಾಯಿತು
ವಿಜಯೋತ್ಸವದ ಕಾರ್ಯಕ್ರಮದಲ್ಲಿ ಸುರೇಶ ಗೋಕಾಕ, ಕಿರಣ್ಉಪ್ಪಾರ,ಅಶೋಕ ಹಾದಿಮನಿ
ಮಹೇಶ ಹೆಬ್ಬಳ್ಳಿ, ಚೇತನ್ ವಿಜಯ ಉರ್ಕಡ್ಲಿ
ಪವನ ಶಿರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..