ಹುಬ್ಬಳ್ಳಿ –
BRTS ಟ್ರ್ಯಾಕ್ ನಲ್ಲಿ ಬೇಕಾಬಿಟ್ಟಿ ಖಾಸಗಿ ವಾಹನಗಳ ಓಡಾಟ – ಭಯದಲ್ಲಿಯೇ ಕರ್ತವ್ಯ ಮಾಡುತ್ತಿರುವ ಚಾಲಕರು…..DC ಯವರೇ ಇದ್ಯಾವುದು ನಿಮಗೆ ಕಾಣೊದಿಲ್ವಾ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡು ತ್ತಿರುವ ಚಿಗರಿ ಬಸ್ ಗಳ ಪರಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.ಆರಂಭಗೊಂಡು ಐದಾರು ವರ್ಷಗಳು ಕಳೆದಿದ್ದು ಕಾಂಕ್ರೀಟ್ ರಸ್ತೆಗಳೇ ಬಸ್ ಗಳನ್ನು ಬಹುತೇಕ ಹಾಳು ಮಾಡಿರುವ ವಿಚಾರ ಒಂದೆಡೆಯಾದರೆ ಇನ್ನೂ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮವಾಗಿ ಬಸ್ ಗಳು “ಬಿಡಿ”ಯಾಗುತ್ತಿವೆ. ಬಸ್ ಗಳು ಹಾಳಾಗಿದ್ದರು ಕೂಡಾ ಇದ್ದ ವ್ಯವಸ್ಥೆಯಲ್ಲಿ ಅನುಭವಿ ಮತ್ತು ನುರಿತ ಚಾಲಕರ ಕರ್ತವ್ಯ ನಿಷ್ಠೆಯಿಂದಾಗಿ ಬಸ್ ಗಳ ಸಂಚಾರ ಯಶಸ್ವಿಯಾಗಿ ನಡೆಯುತ್ತಿದೆ.
ಸರಿಯಾಗಿ ಊಟ ತಿಂಡಿ ಮಾಡದೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ತಿರುಗುತ್ತಾ ಡೂಟಿ ಮಾಡುತ್ತಿರುವ ಚಾಲಕರಿಗೆ ಇತ್ತೀಚಿಗಷ್ಟೇ ಬೆಂಗಳೂರಿನಿಂದ ಬಂದಿರುವ ಡಿಸಿ ಸಿದ್ದಲಿಂಗಯ್ಯ ನವರ ಕಿರಿಕಿರಿ ಒಂದೆಡೆಯಾದರೆ ಇನ್ನೂ ಡೂಟಿಯ ನಡುವೆ ಕೈಕೊಡುತ್ತಿರುವ ಬಸ್ ಗಳ ಕಿರಿಕಿರಿ ಮತ್ತೊಂದೆಡೆ ಹೀಗಿರುವಾಗ ಬಿಆರ್ ಟಿಎಸ್ ನ ಟ್ರ್ಯಾಕ್ ನಲ್ಲಿ ಖಾಸಗಿ ವಾಹನಗಳ ಸಂಚಾರ ಮತ್ತೊಂದು ತಲೆನೋವಿನ ಸಂಗತಿಯಾಗಿದೆ.
ಚಿಗರಿ ಬಸ್ ಅಂಬ್ಯೂಲೆನ್ಸ್ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ಇರುವ ಈ ಒಂದು ರಸ್ತೆಯಲ್ಲಿ ಸಧ್ಯ ಎಲ್ಲಾ ವಾಹನಗಳು ಸಂಚಾರವನ್ನು ಮಾಡುತ್ತಿವೆ ಆರಂಭದಲ್ಲಿ ಎಲ್ಲದಕ್ಕೂ ಈ ಒಂದು ರಸ್ತೆಯಲ್ಲಿ ನಿರ್ಬಂಧವನ್ನು ಮಾಡಲಾಗಿತ್ತು ಅದೇ ರೀತಿ ಸಾರ್ವಜನಿಕರು ಕೂಡಾ ಭಯಪಡುತ್ತಿದ್ದರು ಆದರೆ ಸಧ್ಯ ಯಾರಿಗೂ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದೆ
ಬೇಕಾಬಿಟ್ಟಿಯಾಗಿ ಪೊಲೀಸ್ ವಾಹನಗಳು, ರಾಜಕಾರಣಿಗಳ ಕಾರುಗಳ ದರ್ಬಾರ್,ಅವರೇ ಇಲ್ಲಿ ತಿರುಗಾಡುತ್ತಿರುವಾಗ ನಾವೇನು ಕಮ್ಮಿ ಎಂಬಂತೆ ಸಾರ್ವಜನಿಕರು ಕೂಡಾ ತಮ್ಮ ವಾಹನಗಳನ್ನು ಸಂಚಾರ ಮಾಡಿಸುತ್ತಿದ್ದಾರೆ ಹೀಗಾಗಿ ಈ ಒಂದು ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಹೆಚ್ಚಾಗಿದ್ದು ಇದು ಕೂಡಾ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿದೆ.
ಹಲವು ಬಾರಿ ಈ ಒಂದು ಖಾಸಗಿ ವಾಹನಗಳ ಸಂಚಾರದಿಂದ ಅಪಘಾತಗಳಾಗಿದ್ದು ಇಷ್ಟೇಲ್ಲಾ ಕಂಡು ಬಂದಿದ್ದರು ಕೂಡಾ ಇದ್ಯಾವುದು ಕಂಡು ಕಾಣದಂತೆ ಇದ್ದಾರೆ ಅಧಿಕಾರಿಗಳು.ಇನ್ನೂ ಚಾಲಕರ ಕಾರ್ಯವೈಖ ರಿಯನ್ನು ಪರೀಕ್ಷೆ ಮಾಡಲು ಬಸ್ ನಲ್ಲಿ ಪ್ರಯಾಣ ಮಾಡುತ್ತಿರುವ ಡಿಸಿ ಯವರೇ ಈ ಒಂದು ಪರಸ್ಥಿತಿ ಕಾಣುತ್ತಿಲ್ಲವೇ ಹಾಳಾದ ಬಸ್ ಗಳು ಹಾಳಾದ ರಸ್ತೆಗಳು ತೆಗ್ಗು ಗುಂಡೆ ಗಳಿಂದ ತುಂಬಿದ ರಸ್ತೆಗಳು,
ನಿಮ್ಮ ಕಿರಿಕಿರಿ ಇಷ್ಟೇಲ್ಲಾ ಕಿರಿಕಿರಿಯ ನಡುವೆ ಖಾಸಗಿ ವಾಹನಗಳ ಓಡಾಟವು ಮತ್ತೊಂದು ಸಮಸ್ಯೆಯಾಗಿದ್ದು ಇನ್ನಾದರೂ ಡಿಸಿಯವರೇ ಮೂಲ ಉದ್ದೇಶವನ್ನು ಮರೆತಿರುವ ಬಿಆರ್ ಟಿಎಸ್ ರಸ್ತೆಯಲ್ಲಿ ಏನಾಗುತ್ತಿದೆ ಏನೇನು ನಡೆಯುತ್ತಿದೆ ಚಾಲಕರು ಹೇಗೆ ಡೂಟಿ ಮಾಡ್ತಾ ಇದ್ದಾರೆ ಒಮ್ಮೆ ನೋಡಿ ನೆಮ್ಮದಿಯ ವಾತಾವರಣ ನ್ನುಂಟು ಮಾಡಿ ಆ ಒಂದು ನಿರೀಕ್ಷೆಯಲ್ಲಿ ಚಾಲಕರಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..