ಹುಬ್ಬಳ್ಳಿ –
ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣದ ಪರಸ್ಥಿತಿ ಕಾಣುತ್ತಿಲ್ಲವೇ DC ಯವರೇ – ಚಿಗರಿ ಬಸ್ ಚಾಲಕರು ಹೇಗೆ ಪರದಾಡುತ್ತಿದ್ದಾರೆ ಒಮ್ಮೆ ನೋಡಿ…..ಮನುಷ್ಯರೇ ಸಂಚಾರ ಮಾಡಲಾರದ ಪರಸ್ತಿತಿಯಲ್ಲಿ ಚಿಗರಿ ಬಸ್ ಹೇಗೆ ಹೋಗಬೇಕು ಹೇಳಿ…..
ಹುಬ್ಬಳ್ಳಿ ಹೆಸರಿಗೆ ಮಾತ್ರ ವಾಣಿಜ್ಯ ನಗರಿ,ಸ್ಮಾರ್ಟ್ ಸಿಟಿ,ಉತ್ತರ ಕರ್ನಾಟಕದ ಹೆಬ್ಬಾಗಿಲು ಆದರೆ ಚೆನ್ನಮ್ಮ ಸರ್ಕಲ್ ಸುತ್ತ ಮುತ್ತಲಿನ ಪರಸ್ಥಿತಿ ಚಿತ್ರಣ ನೋಡಿದರೆ ಇದ್ಯಾವ ಪಟ್ಟಣ ಊರು ಕೆರೆ ಎನ್ನುವ ಮಾತುಗಳು ಪ್ರತಿಯೊಬ್ಬರಿಂದಲೂ ಕೇಳಿ ಬರುತ್ತಿವೆ.ಹೌದು ಇಂತಹ ಪರಸ್ಥಿತಿಯಲ್ಲಿ ಮನುಷ್ಯರೇ ಹೋಗಲಾರದಂತಹ ವ್ಯವಸ್ಥೆಯ ನಡುವೆ ಇನ್ನೂ ಕೋಟಿ ಕೋಟಿ ಬೆಲೆ ಬಾಳುವ ಚಿಗರಿ ಬಸ್ ಗಳು ಹೇಗೆ ಹೋಗಬೇಕು ಎಂಬೊದಕ್ಕೆ ಡಿಸಿ ಸಿದ್ದಲಿಂಗಯ್ಯ ಅವರೇ ಉತ್ತರಿಸ ಬೇಕಿದೆ.
ಒಂದು ಕಡೆಗೆ ದೊಡ್ಡ ದೊಡ್ಡ ತೆಗ್ಗುಗಳು ಮತ್ತೊಂದೆಡೆ ಸಂಪೂರ್ಣವಾಗಿ ತೆಗ್ಗುಗಳಲ್ಲಿ ನಿಂತುಕೊಂಡಿರುವ ನೀರು ಬಲೂನ್ ಗಳ ಮೇಲೆ ಓಡಾಡುವ ಈ ಒಂದು ಬಸ್ ಗಳು ಸ್ವಲ್ಪು ಹೆಚ್ಚು ಕಡಿಮೆ ಏನಾದರೂ ಆದರೂ ಬಸ್ ಗಳ ಕಥೆ ಮುಗಿಯಿತು ಹೀಗಿರುವಾಗ ನಗರದಲ್ಲಿ ರುವ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಇವ ರೊಂದಿಗೆ ಅಧಿಕಾರಿಗಳು ಕೂಡಾ ನಿದ್ರಾವಸ್ಥೆಯಲ್ಲಿದ್ದಾರೆ ಇತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಾ ಕಂಡು ಕಾಣದಂತೆ ಇದ್ದಾರೆ ಎಂಬೊದಕ್ಕೆ ಇಲಾಖೆಯ ಅಧಿಕಾರಿ ಗಳೇ ಸಾಕ್ಷಿಯಾಗಿದ್ದಾರೆ..
ಪ್ರತಿದಿನ ಇಲ್ಲಿಯೇ ಸುತ್ತಾಡುತ್ತಿರುವ ಡಿಸಿ ಸಿದ್ದಲಿಂ ಗಯ್ಯ ಅವರಿಗೆ ಈ ಒಂದು ಹದಗೆಟ್ಟಿರುವ ಚಿತ್ರಣವು ಕಾಣುತ್ತಿಲ್ಲವೇ ಇದರಲ್ಲಿಯೇ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಚಾಲನೆ ಮಾಡುತ್ತಿರುವ ಚಾಲಕರ ಗೋಳಾಟ ಪರದಾಟ ಕಾಣುತ್ತಿಲ್ಲವೇ ಕಂಡರು ನಮಗ್ಯಾಕೆ ಬಿಡಿ ಎಂದುಕೊಂಡು ಮೌನವಾಗಿರುವ ಡಿಸಿಯವರೇ ಈಗಾಗಲೇ ಇದರಲ್ಲಿ ಬಸ್ ಚಾಲನೆ ಮಾಡುವಾಗ ಬಸ್ ಗೆ ಆಗಿರುವ ಸಮಸ್ಯೆಯಿಂದಾಗಿ ಚಾಲಕರೊಬ್ಬರಿಗೆ ಬೇರೆ ಡಿಪೋ ಗೆ ವರ್ಗಾವಣೆಯ ಶಿಕ್ಷೆಯನ್ನು ನೀಡಿದ್ದಿರಿ
ಸಧ್ಯ ಈಗಲೂ ಚಾಲಕರಿಗೆ ಹಳೆ ಬಸ್ ನಿಲ್ದಾಣ ನಿಲುಗಡೆ ಒಂದು ತಲೆನೋವಿನ ವಿಚಾರವಾದರೆ ಇದರೊಂದಿಗೆ ಇಲ್ಲಿನ ತೆಗ್ಗು ದಿಣ್ಣೆಗಳಿಂದ ಕೂಡಿದ ಪರಸ್ಥಿತಿ ಮತ್ತೊಂದು ದೊಡ್ಡ ಆತಂಕವನ್ನುಂಟು ಮಾಡಿದ್ದು ಪ್ರತಿದಿನ ಚಾಲಕರ ಕಾರ್ಯವೈಖರಿಯನ್ನು ಪರೀಕ್ಷೆ ಮಾಡುವ ಡಿಸಿಯವರೇ ನಿಮಗೆ ಹದಗೆಟ್ಟಿರುವ ಈ ಒಂದು ಪರಸ್ತಿತಿ ವ್ಯವಸ್ಥೆ ನಿಜವಾಗಿಯೂ ಕಂಡಿಲ್ಲವೇ ಇಲಾಖೆಯ ಬಗ್ಗೆ ಬಸ್ ಗಳ ಬಗ್ಗೆ ಚಾಲಕರ ಮೇಲೆ ನಿಮಗೆ ಬದ್ದತೆ ಇದ್ದರೆ ಈ ಕೂಡಲೇ ಹಳೆ ಬಸ್ ನಿಲ್ದಾಣದ ನಿಲುಗಡೆಯನ್ನು ರದ್ದು ಮಾಡಿ
ಇಲ್ಲಿನ ವ್ಯವಸ್ಥೆಯನ್ನು ಸುಧಾರಣೆ ಮಾಡಿ ಇಲ್ಲವಾದರೆ ಬಸ್ ಗಳು ಹಾಳಾಗುತ್ತವೆ ಜೊತೆ ಚಾಲಕರಿಗೆ ಮಾಡ ಲಾರದ ತಪ್ಪಿಗಾಗಿ ಶಿಕ್ಷೆಯಾಗುತ್ತದೆ.ವ್ಯವಸ್ಥೆ ಸುಧಾರಣೆ ಮಾಡದಿದ್ದರೆ ಸಾರ್ವಜನಿಕರೇ ನಿಮ್ಮ ವಿರುದ್ದ ಹೋರಾಟಕ್ಕಿಳಿಯಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..