ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಚಾಲಕರಿಗೆ,ನಿರ್ವಹಕರಿಗಿಲ್ಲ ಮೂಲಭೂತ ಸೌಲಭ್ಯ ಗಳು – ಬಸ್ ನಲ್ಲಿಯೇ ಊಟ ಬಸ್ ನಲ್ಲಿಯೇ ಮಲಗೊದು…..ದೊಡ್ಡ ನಿಲ್ದಾಣದಲ್ಲಿ ಕಾಣದ ಮೂಲಭೂತ ಸೌಲಭ್ಯಗಳು…..
ಸಾಮಾನ್ಯವಾಗಿ ಬಸ್ ನಿಲ್ದಾಣ ಅಂದರೇ ಅಲ್ಲಿ ಮೂಲಭೂತ ಸೌಲಭ್ಯಗಳು ಇರಬೇಕು ಅದನ್ನು ಮಾಡೊದು ಕಲ್ಪಿಸೊದು ಇಲಾಖೆಯ ಮತ್ತು ಅಧಿಕಾರಿ ಗಳ ಜವಾಬ್ದಾರಿ ಹೀಗಿರುವಾಗ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳು ಮರಿಚಿಕೆಯಾಗಿವೆ ಹೌದು ಇಲ್ಲಿಗೆ ಬರುವ ಸಾರ್ವಜನಿ ಕರಿಗೆ ಅಲ್ಲದೇ ಬಸ್ ಚಾಲಕರು,ನಿರ್ವಾಹಕರಿಗೆ ಶೌಚಾಲಯವೊಂದನ್ನು ಬಿಟ್ಟರೆ ಯಾವುದೇ ಸೌಲಭ್ಯ ಗಳಿಲ್ಲ
ಹೌದು ಬೇರೆ ಊರುಗಳಿಂದ ಧಾರವಾಡಗೆ ವಾಸ್ತವ್ಯಕ್ಕೆ ಬಂದರೆ ಬಸ್ ನಲ್ಲಿಯೇ ಕುಳಿತುಕೊಂಡು ಊಟ ಮಾಡಬೇಕು ಬಸ್ ನಲ್ಲಿಯೇ ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳಲು ಸೊಳ್ಳೆ ಪರದೆಯನ್ನು ಕಟ್ಟಿಕೊಂಡು ಮಲಗಬೇಕು ಇಂತಹ ವ್ಯವಸ್ಥೆ ಇಲ್ಲಿದೆ.ನಿಲ್ದಾಣ ದೊಡ್ಡ ದಾಗಿದೆ ಚಾಲಕರಿಗಾಗಿ ವಿಶ್ರಾಂತಿ ಗೃಹ ಊಟದ ಕೋಣೆ ಗಳನ್ನು ವ್ಯವಸ್ಥಿತವಾಗಿ ಮಾಡಿಸಬೇಕಾಗಿತ್ತು ಆದರೆ ಇದ್ಯಾವುದು ಇಲ್ಲಿ ಕಾಣವುದಿಲ್ಲ
ಹೀಗಾಗಿ ಚಾಲಕರಿಗೆ ನಿರ್ವಾಹಕರಿಗೆ ಬಸ್ ಆಸರೆ ಯಾಗಿದೆ ಹೆಸರಿಗೆ ಮಾತ್ರ ಒಂದು ಕೋಣೆ ಇದ್ದು ಅದು ಯಾವುದಕ್ಕೂ ಯಾರಿಗೂ ಅನುಕೂಲವಾಗೊದಿಲ್ಲ ಹೀಗಾಗಿ ವಾಸ್ತವ್ಯಕ್ಕೆ ಬಂದಿರವ ಬಹುತೇಕ ಚಾಲಕರು ನಿರ್ವಾಹಕರು ಬಸ್ ನಲ್ಲಿಯೇ ಕುಳಿತುಕೊಂಡು ಊಟ ಮಾಡಿ ಬಸ್ ನಲ್ಲಿಯೇ ಏನಾದರೂ ವ್ಯವಸ್ಥೆ ಮಾಡಿ ಕೊಂಡು ಮಲಗಿ ಬೆಳಿಗ್ಗೆ ಎದ್ದು ಹೋಗುತ್ತಾರೆ ಮುಂದು ವರೆದ ಇಂದಿನ ವ್ಯವಸ್ಥೆಯಲ್ಲಿ ಇನ್ನೂ ಕೂಡಾ ಈ ಒಂದು ವ್ಯವಸ್ಥೆ ಇದೆ ಎಂದರೆ ನಿಜಕ್ಕೂ ಕೂಡಾ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿಯೇ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿದ್ದು
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಈ ಒಂದು ಕುರಿತಂತೆ ಗಮನ ಹರಿಸಿ ಸಮಸ್ಯೆಯನ್ನು ಸುಧಾರಣೆ ಮಾಡಿ ಇಲ್ಲಿಗೆ ಬರುವ ಚಾಲಕರಿಗೆ ನಿರ್ವಾಹಕರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಾರೆ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……