ಬೆಂಗಳೂರು –

ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯು ವರೇ ಹೆಚ್ಚು ಅಲ್ಲಿ ಏನಿದೆ ಬಿಡು ಅಲ್ಲಿಯವರು ಏನು ಕಲಿಸುತ್ತಾರೆ ಬಿಡು ಎನ್ನುತ್ತಿರುವವರು ಈಗ ಅದೇ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.ಖಾಸಗಿ ಶಾಲೆಗಳ ಆರ್ಭಟದ ನಡುವೆ ಈಗಲೂ ಕೂಡಾ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂಬಂತೆ ಶಾಲೆಗಳು ಅಲ್ಲಿನ ಶಿಕ್ಷಕರು ಮತ್ತು ಮಕ್ಕಳು ಮೇಲಿಂದ ಮೇಲೆ ಸಾಬೀತುಪಡಿ ಸುತ್ತಿದ್ದಾರೆ.

ಹೌದು ಹೀಗಿರುವಾಗ ಸಧ್ಯ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾ ಗಿದೆ.ಕೊರೊನಾ ಹಿನ್ನೆಲೆಯಲ್ಲಿ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ.ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಸರ್ಕಾರಿ ಶಾಲೆನಾ ಎಂದು ಮೂಗು ಮುರಿಯುತ್ತಿದ್ದ ವರು ಈಗ ಬೆರಳಿಟ್ಟುಕೊಳ್ಳುವ ಪ್ರಸಂಗ ಎದುರಾ ಗ್ತಿದೆ.ಖಾಸಗಿ ಶಾಲೆಗೆ ಸೇರಿಸುತ್ತಿದ್ದ ಮಕ್ಕಳು ಕೊರೊ ನಾದಿಂದಾಗಿ ಸರ್ಕಾರಿ ಶಾಲೆ ದಾಖಲಾಗುತ್ತಿದ್ದಾರೆ. ಕೊರೊನಾ ಕಳೆದ ಒಂದೂವರೆ ವರ್ಷದಿಂದಲೂ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.

ಆನ್ ಲೈನ್, ಯೂ ಟ್ಯೂಬ್ ಪಾಠ ಜಂಜಾಟದ ನಡುವೆ ಪೋಷಕರಿಗೆ ಫೀಸ್ ಪೀಕಲಾಟ ಕೂಡ ಶುರುವಾಗಿತ್ತು.ಕಳೆದ 15 ತಿಂಗಳುಗಳಿಂದ ಶಾಲೆಯ ಮುಖವನ್ನೇ ನೋಡದ ಮಕ್ಕಳಿಗೆ ಯಾಕೆ ಪೂರ್ಣ ಶುಲ್ಕ ಕಟ್ಟಬೇಕೆಂಬ ಗಲಾಟೆ ಬೆಂಗಳೂರು ಸೇರಿ ದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬಂದಿದೆ.

ದಿನ ಬೆಳಗಾದ್ರೆ ಸಾಕು ಶುಲ್ಕ ವಿಚಾರವಾಗಿ ಖಾಸಗಿ ಶಾಲೆಗಳು ಪೋಷಕರ ನಡುವೆ ವಾಗ್ವಾದ ಮಾಡು ತ್ತಾ ಮೇಲಿಂದ ಮೇಲೆ ವಾಟ್ಸ್ ಆಪ್ ಸಂದೇಶ ಕಳಿಸುತ್ತಾ ಹಿಂಸೆಯನ್ನು ನೀಡುತ್ತಿರುವ ಆ ಖಾಸಗಿ ಶಾಲೆಗಳ ಟಾರ್ಚರ್ ನಿಂದಾಗಿ ಹಾಗೇ ಕೊರೊನಾ ಕಾಟದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷ ಕರು ಮಕ್ಕಳಿಗೆ ಶಿಕ್ಷಣ ಕೊಡಿಸೋದಕ್ಕೆ ಒದ್ದಾಡುತ್ತಿ ದ್ದಾರೆ.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆಗಳು ದಾಖಲೆ ಮಟ್ಟದಲ್ಲಿ ದಾಖಲಾತಿ ಆಗ್ತಿದೆ. 2021-22ನೇ ಸಾಲಿನ ಶೈಕ್ಷಣಿಕ ವರ್ಷದ ದಾಖಲಾತಿ ಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಪ್ರವೇಶ ಪ್ರಕ್ರಿಯೆ ಹೆಚ್ಚಾಗುತ್ತಿದೆ.

1ರಿಂದ 10ನೇ ತರಗತಿವರೆಗೂ ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ಮಕ್ಕಳ ದಾಖಲಾತಿ ಆಗಿದ್ದಾರೆ. ಜೂನ್ 15 ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಕೇವಲ 15 ದಿನದಲ್ಲೇ ಸರ್ಕಾರಿ ಶಾಲೆಗಳಿಗೆ ಬಂಪರ್ ಹೊಡೆದಿದೆ.ಜೂ.15 ರಿಂದ ಈವರೆಗೆ ಒಟ್ಟು 16,52,613 ಮಕ್ಕಳು ಸರ್ಕಾರಿ ಶಾಲೆಗೆ ಸೇರ್ಪಡೆಯಾಗಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಖಾಸಗಿ ಶಾಲೆಗಳ ಪೋಷ ಕರು ಶುಲ್ಕ ಕಟ್ಟಲಾಗದೆ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಜೊತೆಗೆ ಕೊರೊನಾ ಭಯಕ್ಕೆ ತಮ್ಮ ಸ್ವಂತ ಊರುಗಳನ್ನು ಸೇರಿರುವ ಪೋಷಕರು ತಮ್ಮ ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಶಿಕ್ಷಣ ಕೊಡಿಸಲು ಮುಂದಾಗಿದ್ದು,ಸರ್ಕಾರಿ ಶಾಲೆಗ ಳಿಗೆ ಹೆಚ್ಚು ಪ್ರವೇಶವನ್ನು ಮಾಡಿದ್ದಾರೆ.2021 – 22 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಯಾವ ಶಾಲೆ ಎಷ್ಟೆಷ್ಟು ಮಕ್ಕಳು ದಾಖಲಾಗಿದ್ದಾರೆ ಎಂದು ನೋಡೊದಾದರೆ

ಸರ್ಕಾರಿ ಶಾಲೆಯಲ್ಲಿ ಒಟ್ಟು 16,53,613 ಮಕ್ಕಳು ದಾಖಲು ಅನುದಾನಿತ ಶಾಲೆಗಳಲ್ಲಿ 3,10,883 ಮಕ್ಕಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ 4,48,699 ಮಕ್ಕಳು ದಾಖಲಾಗಿದ್ದಾರೆ

2021-22ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಮಕ್ಕಳ ವಿವರ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ದಾಖಲಾದ ಮಕ್ಕಳ ವಿವರ ಸರ್ಕಾರಿ ಶಾಲೆಗೆ 42,91,812 ವಿದ್ಯಾರ್ಥಿಗಳು ದಾಖಲು ಅನುದಾನಿತ ಶಾಲೆಗಳಿಗೆ 13,17,233 ಮಕ್ಕಳ ದಾಖಲಾತಿ ಪಡೆದುಕೊಂಡಿದ್ದಾರೆ.

ಖಾಸಗಿ ಶಾಲೆಗಳಿಗೆ 45,34,201 ಮಕ್ಕಳು ದಾಖಲಾ ಗಿದ್ದರೆ ಈ ವರ್ಷ ದಾಖಲಾತಿಗೆ ಮತ್ತಷ್ಟು ಸಮಯಾ ವಕಾಶವಿದ್ದು, ಆಗಸ್ಟ್ ತಿಂಗಳವರೆಗೆ ವಿಸ್ತರಿಸಲಾ ಗಿದೆ.ಹೀಗಾಗಿ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಗೆ ದಾಖಲಾಗುವ ನಿರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಇದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಹೆಚ್ಚಳ ವಿಚಾರವಾಗಿ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಕೊರೊನಾ ಹಿನ್ನೆಲೆ ನಗರ ಪ್ರದೇಶ ತೊರೆದು ಗ್ರಾಮೀಣ ಪ್ರದೇಶಗಳಿಗೆ ಪೋಷಕರು ಮುಖ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಪೋಷಕರು ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.

ಇತ್ತ ಜಿಲ್ಲೆಗಳ ದಾಖಲಾತಿಯಲ್ಲಿ ಖಾಸಗಿ ಶಾಲೆಗಳನ್ನ ಹಿಂದಿಕ್ಕಿ, ಜಿಲ್ಲೆಗಳಲ್ಲಿನ ಸರ್ಕಾರಿ ಶಾಲೆಗಳೇ ಟಾಪ್ ಒನ್ ನಲ್ಲಿವೆ. ಹಾವೇರಿ, ಮಂಡ್ಯ, ಮೈಸೂರು, ದಾವಣಗೆರೆ, ಬೀದರ್, ಕಲಬುರ್ಗಿ, ಯಾದಗಿರಿ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಕಾರವಾರ, ಮಂಗಳೂರು,ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂ.ಗ್ರಾಮಾಂತರ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳವಾಗಿದೆ.

ದಾಖಲಾತಿ ಪ್ರಕ್ರಿಯೆ ಇನ್ನು ಕೂಡ ಮುಂದುವರೆ ಯುತ್ತಿದೆ.ಒಟ್ಟಿನಲ್ಲಿ ಸರ್ಕಾರಿ ಶಾಲೆ ಅಂದ್ರೆ ಕೊಂಕು ಮಾತನಾಡ್ತಿದ್ದ ಪೋಷಕರಿಗೆ ಕೊರೊನಾ ಪಾಠ ಕಲಿಸಿದೆ.ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಎಷ್ಟೋ ಪೋಷಕರ ಮಕ್ಕಳನ್ನ ಸರ್ಕಾರಿ ಶಾಲೆಗಳತ್ತ ಮರಳಿ ತರಳು ಶಿಕ್ಷಣ ಇಲಾಖೆ ಕೂಡ ಸರ್ಕಸ್ ನಡೆಸ್ತಿದೆ. ಆದ್ರೆ, ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗ್ತಿರೋದು ಖಾಸಗಿ ಶಾಲೆಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣ ಮಿಸಿದೆ.

1-10ನೇ ತರಗತಿಗೆವರೆಗೆ ಸರ್ಕಾರಿ ಶಾಲೆಗಳಲ್ಲೇ 16 ಲಕ್ಷಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಶಾಲೆ ಯಿಂದ ಹೊರಗುಳಿದ ಮಕ್ಕಳನ್ನ ಶಾಲೆಗೆ ಕರೆತರಲು ಪ್ರಯತ್ನ ನಡೀತಿದೆ. ಹೀಗಾಗಿ ಕಳೆದ 15 ದಿನದಿಂದ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನ ಶಾಲೆಗೆ ಕರೆ ತರುವ ಕೆಲಸ ಮಾಡ್ತಿದ್ದಾರೆ.ದಾಖಲಾತಿ ಪ್ರಕ್ರಿಯೆ ಏರಿಕೆಯಲ್ಲಿ ಶಿಕ್ಷಕರ ಪರಿಶ್ರಮ ಹೆಚ್ಚು.

ಇನ್ನೂ ಪ್ರಮುಖವಾಗಿ ಸರ್ಕಾರಿ ಶಾಲೆಗಳಿಗೆ ಸರ್ಕಾರ ಶಿಕ್ಷಣ ಇಲಾಖೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಬೇಕು ಹಾಗೇ ಇಲ್ಲಿ ಕರ್ತವ್ಯ ಮಾಡುತ್ತಿರುವ ಶಿಕ್ಷಕರಿಗೆ ತಾವು ಬಯಸಿದ ಸ್ಥಳ ಗಳಿಗೆ ವರ್ಗಾವಣೆ ಮಾಡಿ ಕರ್ತವ್ಯ ಮಾಡಲು ಅವ ಕಾಶವನ್ನು ಒದಗಿಸಬೇಕು ಅಂದಾಗ ಮಾತ್ರ ಇನ್ನ ಷ್ಚು ಹೆಚ್ಚಿನ ರೀತಿಯಲ್ಲಿ ಶಿಕ್ಷಕರು ಕೆಲಸ ಮಾಡಲು ಅನುಕೂಲವಾಗುತ್ತದೆ

ಸಧ್ಯ ಶಿಕ್ಷಕರು ಕೆಲಸ ಮಾಡುತ್ತಿರುವುದು ಒಂದು ಕಡೆ ಕುಟುಂಬದವರು ಒಂದು ಕಡೆ ಹೀಗಾಗಿ ಏನೇಲ್ಲಾ ನೋವು ಅನುಭವಿಸುತ್ತಾ ಹಿಂಸೆಯಾಗು ತ್ತಿದೆ.ಇದನ್ನು ಸರಿಪಡಿಸಿ ಸರ್ಕಾರಿ ಶಾಲೆಗಳ ಅಭಿ ವೃದ್ದಿಗೆ ಹಾಗೇ ಈಗಾಗಲೇ ಮಾಡಿರುವ ಶಾಲೆಗಳನ್ನು ಗುರುತಿಸಿ ಸೂಕ್ತವಾಗಿ ಪ್ರೋತ್ಸಾಹಿಸಿ ಗೌರವಿಸಬೇಕು
