ಧಾರವಾಡ –
ಫೇಮಸ್ ಆಗಿದೆ ಧಾರವಾಡ ಹೊಸ ಬಸ್ ನಿಲ್ದಾಣದ ಫೇಮಸ್ ಧಾರವಾಡ ಪೇಢಾ ಮಳಿಗೆಯ ಬಾಡಿಗೆ – ತಿಂಗಳ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತದೆ…..ಲೆಕ್ಕದಲ್ಲಿ ಏನು ಇಲ್ಲ ಬಾಡಿಗೆಯಲ್ಲಿ ಲಕ್ಷ ಲಕ್ಷ…..
ಸಾಮಾನ್ಯವಾಗಿ ಯಾವುದೇ ಸರ್ಕಾರಿ ಸ್ಥಳದಲ್ಲಿನ ಬಾಡಿಗೆಯನ್ನು ಆಕಾರದ ಮೇಲೆ ದರವನ್ನು ನಿಗದಿ ಮಾಡಲಾಗುತ್ತದೆ.ಅಳತೆ ಮಾಡಿ ವಾಣಿಜ್ಯ ಮಳಿಗೆಗೆ ತಗೆದುಕೊಂಡಿರುವ ಜಾಗೆಯ ದರವನ್ನು ನಿಗದಿ ಮಾಡಿದ ಮೇಲೆ ಬಾಡಿಗೆ ನಿಗದಿ ಮಾಡಲಾಗುತ್ತದೆ
ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿನ ಬಾಡಿಗೆಯ ವಿಚಾರ ಈಗ ಅಲ್ಲಿನ ವ್ಯಾಪಾರಿಗಳ ಜೀವವನ್ನು ಹಿಂಡುತ್ತಿದೆ ಹೌದು ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಫೇಮಸ್ ಧಾರವಾಡ ಪೇಢಾ ಮಳಿಗೆಯ ದರ.ಹೊಸದಾಗಿ ಟೆಂಡರ್ ತಗೆದುಕೊಂಡಿ ರುವವರು ಈ ಒಂದು ಮಳಿಗೆಯನ್ನು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.ಸಧ್ಯ ಈ ಒಂದು ಮಳಿಗೆಗೆ ಪ್ರತಿ ತಿಂಗಳು 2 ಲಕ್ಷ 10 ಸಾವಿರ ತಗೆದುಕೊಳ್ಳಲಾಗುತ್ತಿದ್ದು ದುಬಾರಿಯಾದ ಬಾಡಿಗೆ ಸಧ್ಯ ಹೊಸ ಬಸ್ ನಿಲ್ದಾಣ ದಲ್ಲಿ ಫೇಮಸ್ ಆಗಿದೆ.
ಫೇಮಸ್ ಧಾರವಾಡ ಪೇಢಾ ಅಂಗಡಿಯ ಪ್ರತಿ ತಿಂಗಳದ ಈ ಒಂದು ದುಬಾರಿ ಬಾಡಿಗೆಯನ್ನು ಕಟ್ಟಲು ವ್ಯಾಪಾರಿ ಪರದಾಡುತ್ತಿದ್ದು ಇನ್ನೂ ಲೆಕ್ಕದಲ್ಲಿ ದಾಖಲೆ ಇಲ್ಲದೇ ಬಾಡಿಗೆಯಲ್ಲಿ ಲಕ್ಷ ಲಕ್ಷ ತಗೆದುಕೊಳ್ಳುತ್ತಿರುವ ಮತ್ತೊಂದು ವಿಚಾರವನ್ನು ಸುದ್ದಿ ಸಂತೆ ಟೀಮ್ ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದಿದ್ದು ಇಲಾಖೆಯ ಹೆಸರಿನಲ್ಲಿ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿರುವವರಿಗೆ ಕಡಿವಾಣ ಹಾಕ್ತಾರಾ ಅಥವಾ ಬಾಡಿಗೆ ಕಟ್ಟುವವರನ್ನು ಕರೆದು ವಿಚಾರಣೆ ಮಾಡಿ ಯಾವುದೇ ಕ್ರಮವನ್ನು ಕೈಗೊಳ್ಳದೇ ಸುಮ್ಮನೆ ಆಗ್ತಾರಾ ಎಂಬೊದನ್ನು ಕಾದು ನೋಡಬೇಕಿದೆ.
ಒಟ್ಟಾರೆ ಏನೇ ಆಗಲಿ ಸಾರಿಗೆ ಇಲಾಖೆ ಏನೇಲ್ಲಾ ಸೂಚನೆ ಕಟ್ಟಪ್ಪಣೆಗಳನ್ನು ನೀಡಿದ್ರು ಕೂಡಾ ಅವುಗ ಳನ್ನು ಗಾಳಿಗೆ ತೂರಿ ಕಡಿಮೆ ದರದಲ್ಲಿ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡುತ್ತಿ ರುವವರ ಮೇಲೆ ಯಾಕೆ ಕ್ರಮವನ್ನು ಕೈಗೊಳ್ಳುತ್ತಿಲ್ಲ ಸುದ್ದಿ ಬರೆದವರನ್ನು ಬಾಡಿಗೆ ಕೊಡುವವರನ್ನು ವಿಚಾರಣೆ ಮಾಡಿ ಮೌನವಾಗುವ ಅಧಿಕಾರಿಗಳೇ ದುಬಾರಿ ಬಾಡಿಗೆ ತಗೆದುಕೊಳ್ಳುತ್ತಿರುವವರ ಮೇಲೆ ಯಾಕೇ ಮೃದು ಧೋರಣೆ
ಸುದ್ದಿ ಸಂತೆ ನ್ಯೂಸ್ ಧಾರವಾಡ…..