ಮುಖ್ಯ ಶಿಕ್ಷಕಿ ಯವರು ಹೀಗ್ಯಾಕೆ ಮಾಡಿದ್ರು…………..ಮಕ್ಕಳಿಗೆ ಆದ್ರೂ ಕೊಟ್ಟಿದ್ದರೆ ಉಪಯೋಗ ವಾಗುತ್ತಿತ್ತು………

ಮಂಡ್ಯ –

ಶಾಲಾ ಮಕ್ಕಳಿಗೆ ವಿತರಣೆ ಮಾಡಬೇಕಾಗಿದ್ದ ಆಹಾರ ಧಾನ್ಯಗಳು ಹುಳು ತಿಂದು ಸಂಪೂರ್ಣವಾಗಿ ಹಾಳಾಗಿರುವ ಘಟನೆ ಮಂಡ್ಯದಲ್ಲಿ ನಡೆದಿವೆ. ಹೌದು ಶಾಲಾ ಸಿಬ್ಬಂದಿ ಹಾಗೂ ನಿರ್ಲಕ್ಷ್ಯದಿಂದಾಗಿ ಹುಳು ಬಿದ್ದು ಹಾಳಾಗಿವೆ ಮಕ್ಕಳ ಪಡಿತರ ಧಾನ್ಯಗಳು ಮಂಡ್ಯದ ಕೆಎಂ ದೊಡ್ಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಒಂದು ಘಟನೆ ನಡಿದಿದೆ.

ಹುಳು ಬಿದ್ದು ಹಾಳಾಗಿದ್ದು ಮಕ್ಕಳಿಗೆ ವಿತರಿಸಿದ್ದರೆ ಅವರಾದರೂ ತಿನ್ನುತ್ತಿದ್ದರು ನೀಡದೆ ಹಾಗೇ ಇಡಲಾ ಗಿದ್ದು ಹೀಗಾಗಿ ಪಡಿತರ ಧಾನ್ಯಗಳು ಹುಳು ತಿಂದಿದ್ದು ಉಪಯೋಗಕ್ಕೆ ಬಾರದಂತಾಗಿವೆ.ಕ್ವಿಂಟಾಲ್‌ಗಟ್ಟಲೇ ಅಕ್ಕಿ,ಬೇಳೆಯಲ್ಲಿ ಹುಳುಗಳ ರಾಶಿ ರಾಶಿ ಕಂಡು ಬಂದಿವೆ.ಕೊವಿಡ್ ಸಮಯದಲ್ಲಿ ಶಾಲೆಗಳು ತಡವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಈ ಒಂದು ವ್ಯವಸ್ಥೆ ಕಂಡು ಬಂದಿದ್ದು ಮುಖ್ಯ ಶಿಕ್ಷಕಿಯವರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಹಸಿವಿನಿಂದ ಮಕ್ಕಳ ಬಳಲಬಾರದು ಎಂದು ಪಡಿತರವನ್ನು ಸರ್ಕಾರ ನೀಡಿದೆ ಆದರೆ ಇವುಗಳನ್ನು ಮಕ್ಕಳಿಗೆ ಕೊಡದೇ ಹಾಗೇ ಇಟ್ಟು ಹಾಳು ಮಾಡಿದ್ದು ಆಕ್ರೋಶ ವ್ಯಕ್ತವಾಗುತ್ತಿದೆ.ತಿಂಗಳಿಗೆ ಪ್ರತಿ ಮಗು ವಿಗೂ 7ಕೆಜಿ 300ಗ್ರಾಂ ಅಕ್ಕಿ, 6 ಕೆಜಿ 800ಗ್ರಾಂ ಬೆಳೆಯನ್ನು ನೀಡಲಾಗುತ್ತಿದೆ.

ಇದರೊಂದಿಗೆ ಹಾಲು ಹಾಗೂ ಉಪ್ಪಿನ ಪ್ಯಾಕೇಟ್ ನೀಡಬೇಕಿತ್ತು ಜೂನ್‌ನಲ್ಲಿ ತಲುಪಿದ್ದ ದಾಸ್ತಾನು ವಿತರಿಸದೆ ನಿರ್ಲಕ್ಷ್ಯವನ್ನು ತೋರಿದ ಆರೋಪ ಈಗ ಮುಖ್ಯ ಶಿಕ್ಷಕಿಯೊಬ್ಬರ ಮೇಲೆ ಕೇಳಿ ಬಂದಿದೆ. ಪಡಿತರ ವಿತರಿಸದಿದ್ದಕ್ಕೆ ಮನೆ ಮತ್ತು ಸಾರಿಗೆ ವೆಚ್ಚ ಸಮಸ್ಯೆಯನ್ನು ಮುಖ್ಯ ಶಿಕ್ಷಕಿಯವರು ನೀಡಿದ್ದಾರೆ.

ಒಂದಿಷ್ಟು ಮಕ್ಕಳಿಗೆ ಪಡಿತರ ನೀಡಿದ್ದು,ಗೈರಾದ ವರಿಗೆ ನೀಡದ ಪಡಿತರ ಮಾತ್ರ ಹಾಳಾಗಿದೆ ಎಂದು ಸಬೂಬನ್ನು ನೀಡಿದ್ದಾರೆ.ಮಕ್ಕಳು ಶಾಲೆಗೆ ಬರದಿದ್ರು ಮನೆಗೆ ತಲುಪಿಸುವಂತೆ ಸರ್ಕಾರದ ನಿರ್ದೇಶನ ವಿದ್ರೂ ನಿರ್ಲಕ್ಷ್ಯವನ್ನು ತೋರಿದ್ದಾರೆ.

ನಿರ್ಲಕ್ಷ್ಯ ಬೆಳಕಿಗೆ ಬರ್ತಿದ್ದಂತೆ ಆಹಾರ ಧಾನ್ಯ ಸ್ವಚ್ಛಗೊಳಿಸಿ ವಿತರಿಸಲು ಕ್ರಮವನ್ನು ಕೈಗೊಂಡಿ ದ್ದಾರೆ.ಅಡುಗೆ ಸಿಬ್ಬಂದಿ ಮೂಲಕ ಅಕ್ಕಿ, ಬೇಳೆ ಸ್ವಚ್ಛಗೊಳಿಸಿ ಮಕ್ಕಳಿಗೆ ವಿತರಿಸಲು ತಯಾರಿ ಮಾಡಿದ್ದಾರೆ.ಹುಳು ಬಿದ್ದು ತಿನ್ನಲು ಯೋಗ್ಯವಲ್ಲದ ಪಡಿತರವನ್ನ ಕ್ಲೀನ್ ಮಾಡುತ್ತಿದ್ದಾರೆ ಸಿಬ್ಬಂದಿ

Leave a Reply

Your email address will not be published. Required fields are marked *

error: Content is protected !!
%d bloggers like this: