ಹುಬ್ಬಳ್ಳಿ –
ಆಕಸ್ಮಾತ್ RSS ಇರದಿದ್ರೆ ಭಾರತ ನಾಲ್ಕೈದು ಪಾಕಿಸ್ತಾನ ಆಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಅಕಸ್ಮಾತ್ RSS ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು.ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸ್ಪರ್ಧೆಗೆ ಬಿದ್ದವರ ರೀತಿಯಲ್ಲಿ ಆರ್ ಎಸ್ ಎಸ್ ಮೇಲೆ ಟೀಕೆ ಮಾಡುತ್ತಿದ್ದಾರೆ. RSS ಸಂಘಟನೆಯನ್ನ ರಾಜಕೀಯ ಕ್ಕಾಗಿ ಬಳಸುತ್ತಿದ್ದಾರೆ.100 ವರ್ಷದ ಸಂಸ್ಥೆ ಅದು, ದೇಶ ಸುರಕ್ಷಿತವಾಗಿದೆ ಅಂದ್ರೆ RSS ಕಾರಣವಾಗಿದೆ ಎಂದರು
ದೇಶದ ಸಂಸ್ಕೃತಿ ಪರಂಪರೆ ಉಳಿಸಿಕೊಂಡು ಹೋಗುವ ಕಾರ್ಯವನ್ನ RSS ಮಾಡುತ್ತಿದೆ.ಅಕಸ್ಮಾತ್ RSS ಇರದಿದ್ರೆ ಭಾರತ 4-5 ಪಾಕಿಸ್ತಾನ ಆಗುತ್ತಿತ್ತು ಎಂದರು. ಇನ್ನೂ ದೇಶದಲ್ಲಿ ಸೌಹಾರ್ದವನ್ನು ಕಾಪಾಡಿಕೊಂಡು ಹೋಗುವಲ್ಲಿ RSS ಪ್ರಮುಖ ಪಾತ್ರವನ್ನು ವಹಿಸಿದ್ದು ಕುಮಾರಸ್ವಾಮಿ ಹೇಳಿದಂತೆ ಹಿಂದಿನ ಸಂಘ ಬೇರೆ ಈಗೀನ ಸಂಘ ಬೇರೆ ಅಂತಾರೆ.ಹಿಂದಿನ ಜೆಡಿಎಸ್, ಹಿಂದಿನ ಜನತಾದಳ, ಹಿಂದಿನ ಕಾಂಗ್ರೆಸ್ ಅಂದ್ರೆ ನಂಬಬಹುದು ಎಂದರು.
ಆದ್ರೆ RSS ಯಾವಾಗಲೂ RSS, ಎಂದಿಗೂ ಅದು ಬದಲಾ ಗುವುದಿಲ್ಲ ಎಂದು ಟಾಂಗ್.RSS ಮೂಲತತ್ವ, ವಿಚಾರ ಗಳು ಎಂದೂ ಬದಲಾಗುವುದಿಲ್ಲ.ಸಂಘ ಸ್ಥಾಪನೆ ಯದಾಗಿ ನಿಂದ ಒಂದೇ ವಿಚಾರ,ದೇಶ ಮೊದಲು ಉಳಿದಿದ್ದೆಲ್ಲ ನಂತರ ಎನ್ನುವ ತತ್ವದಲ್ಲಿದೆ.ಕುಮಾರಸ್ವಾಮಿ, ಸಿದ್ದರಾ ಯಯ್ಯ,ಕಾಂಗ್ರೆಸ್, ಜನತಾ ಪರಿವಾರ ಬದಲಾದ್ರೂ ಸಂಘ ಬದಲಾಗಿಲ್ಲವೆಂದರು.ಅಲ್ಪಸಂಖ್ಯಾತರ ಓಲೈಕೆಗಾಗಿ ಹೆಚ್ಡಿಕೆ,ಸಿದ್ದರಾಮಯ್ಯ ಪೈಪೋಟಿ ಗೆ ಇಳಿದಿದ್ದಾರೆ ಅವರ ಓಲೈಕೆ ಒಂದೇ ಉದ್ದೇಶಕ್ಕಾಗಿ RSS ನ್ನ ಯಾಕೆ ಬೈಯ್ಯುತ್ತಿರಿ ಎಂದು ಪ್ರಶ್ನೆ ಮಾಡಿದರು.RSS ಸಂಘಟನೆ ಯಾಕೆ ಟಾರ್ಗೆಟ್ ಮಾಡ್ತೀರಿ,ದೇಶಕ್ಕೆನಾದರೂ ಅನ್ಯಾಯ ಮಾಡಿ ದ್ದಾರೆ ನಿಮ್ಮ ರಾಜಕಾರಣದ ತೆವಲಿಗಾಗಿ RSS ಬೈಯೋದು ಸೂಕ್ತವಲ್ಲ ಇದರಿಂದ ನಿಮಗೆ ಧಕ್ಕೆಯಾಗಲಿದೆ ಎಂದರು.