This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಸರ್ಕಾರಿ ಶಾಲಾ ಶಿಕ್ಷಕಿಗೆ ಗಲ್ಲು ಶಿಕ್ಷೆ – ಎರಡು ದಶಕದ ನಂತರ ಶಿಕ್ಷೆಯ ಆದೇಶ ಮಾಡಿದ ನ್ಯಾಯಾಲಯ…..

ಸರ್ಕಾರಿ ಶಾಲಾ ಶಿಕ್ಷಕಿಗೆ ಗಲ್ಲು ಶಿಕ್ಷೆ – ಎರಡು ದಶಕದ ನಂತರ ಶಿಕ್ಷೆಯ ಆದೇಶ ಮಾಡಿದ ನ್ಯಾಯಾಲಯ…..
WhatsApp Group Join Now
Telegram Group Join Now

ಶಿವಮೊಗ್ಗ

ಮದುವೆಯಾಗಿ ಆಟೋ ಚಾಲಕನ ಪ್ರೇಮಪಾಶಕ್ಕೆ ಬಿದ್ದು ಗಂಡನನ್ನು ಕೊಂದವಳ ಕಥೆ ಇದು.ಕೊಲೆ ಮಾಡಿದ ನಂತರ ಜಾಮೀನಿನ ಮೇಲೆ ಹೊರಗಿದ್ದು ರಂಗಭೂಮಿಯಲ್ಲಿ ಅದ್ಭುತ ಸಾಧನೆ ಮಾಡಿದ ಶಿಕ್ಷಕಿ ಮತ್ತು ಕಲಾವಿದೆಗೆ ನ್ಯಾಯಾಲಯ ಮರಣ ದಂಡನೆಯ ಶಿಕ್ಷೆ ವಿಧಿಸಿದ್ದು, ಜೊತೆಯಲ್ಲಿ ಕೆಲಸ ಮಾಡಿದವರನ್ನು ಬೇಸ್ತು ಬೀಳುವಂತೆ ಮಾಡಿದೆ.

ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕು ಡೊಂಗರಗಾಂವ್‌ನ ಪ್ರಾಥಮಿಕ ಶಾಲೆಯಲ್ಲಿ 2008ರ ಸುಮಾರಿಗೆ ಶಿಕ್ಷಕಿಯಾಗಿ ಆಗಮಿಸಿದ್ದ ಲಕ್ಷ್ಮಿ ತಮ್ಮ ಬೋಧನೆ, ಪಠ್ಯೇತರ ಚಟುವಟಿಕೆಗಳ ಮೂಲಕ ಛಾಪು ಮೂಡಿಸಿದ್ದರು. ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಯಾಗಿ ಸ್ಥಾನ ಪಡೆದುಕೊಂಡಿದ್ದರು ಮಲೆನಾಡಿನ ಜಿಲ್ಲೆ ಯಿಂದ ಬಯಲುಸೀಮೆಗೆ ಬಂದು ಸುಮಾರು ಏಳೆಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡ ಗಟ್ಟಿಗಿತ್ತಿ ಅವರು.

ಕಲೆ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನ ಮೆಚ್ಚುವ ಸೇವೆ ಮಾಡಿಕೊಂಡಿದ್ದ ಅವರೊಳಗೊಂದು ಜೀವ ಹಾನಿ  ಯಂತಹ ಕ್ರೂರತ್ವ ಅಡಗಿದ್ದನ್ನು ಊಹಿಸಲು ಸಾಧ್ಯ ವಿರಲಿಲ್ಲ. ಸಿಟ್ಟು, ಹತಾಶೆ, ಬೇಸರ ಅವರನ್ನು ಮರಣ ದಂಡನೆಯಡೆಗೆ ನೂಕಿದೆ. ಇವರ ಕಥೆ ಕೇಳಿದ ಕಲಾ  ವಿದರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಜತೆಗೂಡಿ ಕೆಲಸ ಮಾಡಿದವರು ಘಾಸಿಗೀಡಾಗಿದ್ದಾರೆ.

ಕಲಬುರಗಿಯಲ್ಲಿದ್ದಾಗಲೇ ಲಕ್ಷ್ಮಿ ಅವರು ಇಮ್ತಿಯಾಜ್‌ ಅಹಮ್ಮದ್‌ ಅವರನ್ನು ಪ್ರೀತಿಸಿ 2011 ರ ಸುಮಾರಿಗೆ ರಿಜಿಸ್ಟ್ರರ್‌ ಮದುವೆಯಾಗಿದ್ದರು. ಅದಾದ ಕೆಲ ವರ್ಷ ಗಳಲ್ಲಿ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿ ದ್ದರು. ಭದ್ರಾವತಿಯ ಅಂತರಗಂಗೆ ಶಾಲೆಯಲ್ಲಿಕೆಲಸ ಮಾಡಿದ್ದು, ಅಲ್ಲಿಯೂ ಉತ್ತಮ ಹೆಸರು ಗಳಿಸಿದ್ದರು.

ಪತಿ ಇಮ್ತಿಯಾಜ್‌ ಕೊಲೆ ಪ್ರಕರಣದ ಬಳಿಕ ಲಕ್ಷ್ಮಿ ಸಿರಿಗೆರೆಯ ಉರ್ದು ಪ್ರಾಥಮಿಕ ಶಾಲೆಗೆ ಬಂದಿದ್ದರು. ಅಲ್ಲಿ ಪಠ್ಯ ಮಾತ್ರವಲ್ಲದೆ ಶಾಲೆಯ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಶಾಲೆಗೆ ಕಾಂಪೌಂಡ್‌ ಸೇರಿದಂತೆ ನಾನಾ ವಿಷಯಗಳಲ್ಲಿ ಮುಂಚೂಣಿಯಲ್ಲಿದ್ದರು. ಜತೆಗೆ, ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.

ಪತಿ ಇಮ್ತಿಯಾಜ್‌ ಸೊರಬ ತಾಲೂಕು ತೆಲಗುಂದ ಗ್ರಾಮದ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಆಗ ಲಕ್ಷ್ಮಿ ಭದ್ರಾವತಿಯ ಅಂತರಗಂಗೆ ಶಾಲೆಯಲ್ಲಿದ್ದರು. ರಂಜಾನ್‌ ಹಬ್ಬಕ್ಕೆ ಕರೆಯಲು ಬಂದಾಗ ಗಲಾಟೆ ನಡೆದು ಕಬ್ಬಿಣದ ಪೈಪಿನಿಂದ ಹೊಡೆದು ಪತಿಯ ಕೊಲೆ ಮಾಡಿದ್ದರು

ಶವವನ್ನು ಪಕ್ಕದ ಮನೆಯವರಾದ ಕೃಷ್ಣಮೂರ್ತಿ ಮತ್ತು ಶಿವರಾಜ ಸೇರಿ ಹೊಳೆಗೆ ಎಸೆದಿದ್ದರು. ಕೊಲೆಯ ವಿಚಾರವನ್ನು ಖುದ್ದು ಲಕ್ಷ್ಮಿ ಕರೆ ಮಾಡಿ ಇಮ್ತಿಯಾಜ್‌ನ ಸಹೋದರನಿಗೆ ತಿಳಿಸಿದ್ದರು. ಅದಾದ ಬಳಿಕ ಭದ್ರಾವತಿ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಇಡೀ ಪ್ರಕರಣ ದಲ್ಲಿಲಕ್ಷ್ಮಿ ಮತ್ತು ಈತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾದ ಕೃಷ್ಣಮೂರ್ತಿಗೆ ಮರಣ ದಂಡನೆ ವಿಧಿಸಲಾಗಿದ್ದು

ಶಿವರಾಜ್‌ಗೆ ಏಳು ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ರಾಷ್ಟ್ರಮಟ್ಟದಲ್ಲಿ ಮಹಿಳಾ ಸಾಧಕಿ ಯಾಗಿದ್ದರು.ಲಕ್ಷ್ಮಿ ಅವರು ಕಲೆ, ಸಂಸ್ಕೃತಿ ವಿಭಾಗ ದಲ್ಲಿಮಾಡಿದ ಸಾಧನೆಗಳನ್ನು ಮನಗಂಡು ದಕ್ಷಿಣ ಭಾರತ ಮಹಿಳಾ ಸಾಧಕರ ಪ್ರಶಸ್ತಿ (ಎಸ್‌ಐಡಬ್ಲ್ಯು ಎಎ)ಯನ್ನು 2024ರ ಡಿಸೆಂಬರ್‌ 22ರಂದು ನೀಡಲಾಯಿತು. ಕಲೆ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣಕ್ಕೆ ಅವರು ತೋರಿದ ಬದ್ಧತೆಗಾಗಿ ಪ್ರಶಸ್ತಿಯನ್ನು ನೀಡಲಾಗಿತ್ತು.

ಇವರು ಬಾಲ್ಯದಿಂದಲೇ ಸಾಂಸ್ಕೃತಿಕ ಕಲೆಗಳಲ್ಲಿಆಸಕ್ತಿ ಬೆಳೆಸಿಕೊಂಡಿದ್ದರು. ವಿಶೇಷವೆಂದರೆ, ಚಿಕ್ಕ ವಯಸ್ಸಿ ನಿಂದಲೇ ರಂಗಭೂಮಿಯಲ್ಲಿಸಕ್ರಿಯರಾಗಿದ್ದರು. ತಂದೆ ಪ್ರದರ್ಶಿಸಿದ ನಾಟಕಗಳಿಗೆ ಸಂಭಾಷಣೆ ಸಹ ಬರೆಯು ತ್ತಿದ್ದರು. 9ನೇ ತರಗತಿಯಲ್ಲಿಮೊದಲ ಬಾರಿಗೆ ರಂಗ ವೇದಿಕೆಯನ್ನು ಹತ್ತಿದ್ದರು.

ಅಲ್ಲಿಂದ ಶುರುವಾದ ಅವರ ರಂಗಭೂಮಿಯ ಪಯಣ, ಇತ್ತೀಚಿನವರೆಗೆ ಮುಂದುವರಿದಿದೆ. ಹಲವು ನಾಟಕ ಗಳಲ್ಲಿಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದರು.ನಾಟಕ ಮಾತ್ರವಲ್ಲದೇ ಕೂಚುಪುಡಿ ನೃತ್ಯದಲ್ಲೂ ಜನಮೆಚ್ಚುಗೆ ಪಡೆದಿದ್ದರು. ನಾಟಕದಲ್ಲಿನ ಕೆಲವು ಮುಖ್ಯ ಪಾತ್ರಗಳು ಅವರಿಗೆ ಉತ್ತಮ ಹೆಸರನ್ನೂ ತಂದುಕೊಟ್ಟಿದ್ದವು. ರಾಜ್ಯದ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದುಬಂದಿತ್ತು.

ರಾಜ್ಯಮಟ್ಟದ ಸ್ಪರ್ಧೆಗಳಲ್ಲೂಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸೃಜನಶೀಲತೆ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸಿ ಹಾಡುಗಾರಿಕೆ, ನೃತ್ಯ, ನಟನೆಯ ಬಗ್ಗೆ ಉತ್ಸಾಹ ತುಂಬಿದ್ದರು. ವಿಶೇಷವೆಂದರೆ, ಬಡಮಕ್ಕಳಿಗೆ ಉಚಿತ ಸಾಂಸ್ಕೃತಿಕ ಕಲಾ ಶಿಕ್ಷಣವನ್ನು ನೀಡುತ್ತಿದ್ದರು.

ಖಿನ್ನತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಸ್ಫೂರ್ತಿ ನೀಡುವ ಹೆಬ್ಬಯಕೆಯೊಂದಿಗೆ ಮಹಿಳಾ ಕೇಂದ್ರಿತ ನಾಟಕಗಳತ್ತ ಅವರು ವಾಲಿದ್ದರು. ಲಕ್ಷ್ಮಿ ತಮ್ಮ ಬೋಧನಾ ಜವಾಬ್ದಾರಿಯೊಂದಿಗೆ ನಿತ್ಯ ಎರಡು ಗಂಟೆ ರಂಗ ತರಬೇತಿಗೆ ಮೀಸಲಿಟ್ಟಿದ್ದರು ಇಂತಹ ಗಟ್ಟಿಗಿತ್ತಿ ಕೊಲೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ……


Google News

 

 

WhatsApp Group Join Now
Telegram Group Join Now
Suddi Sante Desk