ರಾಜ್ಯದಲ್ಲಿ ಕೋವಿಡ್ ಗೆ ಬಲಿಯಾದ ಮತ್ತೊರ್ವ ಹಿರಿಯ ಉಪನ್ಯಾಸಕ – ಸರಳ ವ್ಯಕ್ತಿತ್ವದ ಆದರ್ಶ ವ್ಯಕ್ತಿತ್ವದ ಬೇವೂರ ಗೌಡರಿಗೆ ಸಂತಾಪ…..

ಮಂಡ್ಯ –

ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೊರ್ವ ಹಿರಿಯ ಉಪನ್ಯಾಸಕರೊಬ್ಬರು ಮೃತರಾಗಿದ್ದಾರೆ. ಹೌದು ಕಳೆದ ಹಲವು ದಿನಗಳ ಹಿಂದೆ ಕರೋನ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖ ಲಾಗಿದ್ದರು‌.ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಇಂದು ಮೃತರಾದರು

ಹೌದು ಬೇವೂರ ಗೌಡರು ಭೌತಶಾಸ್ತ್ರ ಉಪನ್ಯಾಸ ಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಪೋಲಿಸ್ ಕಾಲೋನಿ ಮಂಡ್ಯ ಇವರೇ ಮೃತರಾಗಿದ್ದಾರೆ.ಸರಳ ಸಜ್ಜನಿಕೆ ಹಾಗೂ ನೇರ ವ್ಯಕ್ತಿತ್ವ ಹೊಂದಿದ್ದ ಇವರು ಈದಿನ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ ಮೃತರಾದ ಇವರಿಗೆ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿ ಗೂ ಹಾಗೂ ಹಿತೈಷಿಗಳಿಗೂ ಹಾಗೂ ಮಿತ್ರರಿಗೂ ನೀಡಲಿ ಎಂದು ಆ ದೇವರಲ್ಲಿ ಆತ್ಮೀಯ ಉಪನ್ಯಾ ಸಕರ ಬಳಗ ಮಂಡ್ಯ ವರು ಸಂತಾಪವನ್ನು ಸೂಚಿಸಿ ನಮನ ಸಲ್ಲಿಸಿದರು

ಇನ್ನೂ ಕೋವಿಡ್ ನಿಂದಾಗಿ ಮೃತರಾದ ಇವರಿಗೆ ರಾಜ್ಯದ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೇ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಸಂತಾಪವನ್ನು ಸೂಚಿಸಿದ್ದಾರೆ ಅದರಲ್ಲೂ ವಿಶೇಷವಾಗಿ ನಾಡಿನ ಉಪನ್ಯಾಸಕರ ಬಳಗದವರು ಕೂಡಾ ಸಂತಾಪವನ್ನು ಸೂಚಿಸಿ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!
%d bloggers like this: