ಸರ್ಕಾರಿ ಶಾಲೆಯಲ್ಲಿ ಹೆಚ್ಚುತ್ತಿದೆ ಕರೋನ ಪಾಸಿಟಿವ್ – ಆತಂಕದಲ್ಲಿ ಶಾಲಾ ಮಕ್ಕಳು ಶಿಕ್ಷಕರು…..

ಚಾಮರಾಜನಗರ –

ಗುಂಡ್ಲುಪೇಟೆಯ ಕೊಡಗಾಪುರ ಶಾಲೆಯ ನಂತರ ಈಗ ಹಕ್ಕಲಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಕರೋನಾ ಭೀತಿ ಎದುರಾಗಿದೆ.

ಹೌದು ಚಾಮರಾಜನಗರ ಜಿಲ್ಲೆಯ ಹಕ್ಕಲಪುರ ಸರ್ಕಾರಿ ಶಾಲೆಯ ಓರ್ವ ವಿದ್ಯಾರ್ಥಿಗೆ ಕರೋನಾ ಸೋಂಕು ದೃಢವಾಗಿದೆ.ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಹೋಗಿ ಬಂದಿದ್ದಂತಹ ವಿದ್ಯಾರ್ಥಿಗೆ ಕರೋನಾ ಪಾಸಿಟಿವ್ ತಗುಲಿದೆ.ಎರಡು ವರ್ಷದ ಬಳಿಕ ಪ್ರಾರಂಭವಾದ ಶಾಲೆಗಳಿಗೆ ಈಗ ಕರೋನಾ ಸವಾಲಾಗಿ ಪರಿಣಮಿಸಿದೆ.ದಿನದಿನಕ್ಕೆ ಶಾಲಾ ಮಕ್ಕಳಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಹಕ್ಕಲಪುರ ಶಾಲೆಯ ಎಲ್ಲಾ ಮಕ್ಕಳಿಗೂ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ.ಉಳಿದ ಮಕ್ಕಳ ಕರೋನಾ ವರದಿ ಬರುವವರೆಗೆ ಎರಡು ದಿನಗಳ ರಜೆ ಘೋಷಿಸಲಾಗಿದೆ.
ಶಾಲೆಯಲ್ಲಿನ ಒಟ್ಟು 14 ಮಕ್ಕಳಿಗೆ ಕರೋನಾ RTCPR ಪರೀಕ್ಷೆ ನಡೆಸಲಾಗಿದೆ.ಕರೋನಾ ಪಾಸಿಟಿವ್ ದೃಢ ವಿದ್ಯಾರ್ಥಿಯ ಪೋಷಕರಿಗೂ ಆರ್ಟಿಫಿಸಿಆರ್ ಟೆಸ್ಟ್ ಮಾಡಿಸಲಾಗಿದೆ.ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸ್ಯಾನಿಟೈಸರ್ ಮಾಡಿಸಿ ಎರಡು ದಿನ ಶಾಲೆಗೆ ರಜೆ ಘೋಷಿಸಿಲಾಗಿದೆ.

Leave a Reply

Your email address will not be published.

error: Content is protected !!
%d bloggers like this: