ಬಿಸಿಯೂಟದ ಗುಣಮಟ್ಟವನ್ನು ಪರಿಶೀಲನೆ ಮಾಡಿದ ಶಿಕ್ಷಣ ಸಚಿವರು – ಶಾಲಾ ಮಕ್ಕಳೊಂದಿಗೆ ಮಕ್ಕಳಾಗಿ ಸರ್ಕಾರಿ ಶಾಲೆಯಲ್ಲಿ ಸಚಿವರು ಮಾಡಿದ ಕೆಲಸ ನೋಡಿ…..

ತುಮಕೂರು –

ದಸರಾ ರಜೆ ಮುಗಿದಿದ್ದು ಇಂದಿನಿಂದ ಮತ್ತೆ ಶಾಲೆಗಳು ಆರಂಭವಾಗಿದ್ದು ಇನ್ನೂ ಇದರೊಂದಿಗೆ ಬಿಸಿಯೂಟ ಕೂಡಾ ಆರಂಭವಾಗಿದ್ದು ಹೀಗಾಗಿ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತವರು ಕ್ಷೇತ್ರದಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಸಚಿವರು ಕೆಲವೊತ್ತು ಶಾಲೆಯಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಯವನ್ನು ಕಳೆದರು

ನಂತರ ಶಾಲೆಯನ್ನು ನೋಡಿ ಸಂಪೂರ್ಣವಾಗಿ ವೀಕ್ಷಿಸಿದರು ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಬಿಸಿಯೂ ಟವನ್ನು ಸವಿದರು ಶಿಕ್ಷಣ ಸಚಿವ ಬಿ.ಸಿ ನಾಗೇಶ್.

ತಿಪಟೂರು ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾಗೆ ಭೇಟಿ ನೀಡಿದರು.ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಮಾಹಿತಿಯನ್ನು ಪಡೆದುಕೊಂಡರು.ಕೊರೊನಾ ಆಂತಕದ ನಡುವೆ ಶಾಲೆಯನ್ನು ಸರ್ಕಾರ ಆರಂಭಿಸಿದೆ.

ಮಕ್ಕಳೊಂದಿಗೆ ಮಾತನಾಡಿ ಕೊರೊನಾ ಬಗ್ಗೆ ಭಯ ಪಡಬೇಡಿ ಎಂದು ಧೈರ್ಯ ತುಂಬಿದ ಸಚಿವರು ಬಿಸಿಯೂ ಟದ ಗುಣಮಟ್ಟವನ್ನು ಪರಿಶೀಲಿಸಿದರು ಬಿ.ಸಿ ನಾಗೇಶ್ ಅವರು.

Leave a Reply

Your email address will not be published. Required fields are marked *

error: Content is protected !!
%d bloggers like this: