ಕುಸಿದು ಬಿದ್ದ ಸರ್ಕಾರಿ ಶಾಲೆಯ ಸ್ಲ್ಯಾಬ್ ತಪ್ಪಿತು ದೊಡ್ಡ ದುರಂತ ಮೂವರು ವಿದ್ಯಾರ್ಥಿಗಳಿಗೆ ಗಾಯ

ಹಾಸನ –

ಧಾರಾಕಾರವಾಗಿ ಸುರಿದ ಮಳೆಗೆ ಸರ್ಕಾರಿ ಶಾಲೆಯ ಸ್ಲ್ಯಾಬ್ ವೊಂದು ಕುಸಿದು ಬಿದ್ದು ಮೂವರು ವಿದ್ಯಾರ್ಥಿ ಗಳು ತೀವ್ರವಾಗಿ ಗಾಯಗೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹೌದು ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಗೆ ಹಾಸನದ ಸರ್ಕಾರಿ ಶಾಲೆ ಕುಸಿದು ಬಿದ್ದಿದ್ದು ಮೂವರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.

ಇಂದು 10ನೇ ತರಗತಿ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿ ಶಾಲಾ ಮೇಲ್ಛಾವಣಿ ಏಕಾಏಕಿ ಕುಸಿದು ಮಕ್ಕಳ ಮೇಲೆ ಬಿದ್ದಿದೆ ಘಟನೆ ಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ವಿದ್ಯಾರ್ಥಿ ಗಳನ್ನು ದಾಖಲು ಮಾಡಲಾಗಿದೆ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ದುರಂತ ವೊಂದು ತಪ್ಪಿದಂತಾಗಿದ್ದು ಸುದ್ದಿ ತಿಳಿದ ಶಾಸಕ ಪ್ರೀತಂ ಗೌಡ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ದ್ದಾರೆ.

ಅತ್ತ ಘಟನಾ ಸ್ಥಳಕ್ಕೆ ಡಿಡಿಪಿಐ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.

Leave a Reply

Your email address will not be published. Required fields are marked *

error: Content is protected !!
%d bloggers like this: