ಮಾನವೀಯತೆ ಮೆರೆದ ಮುಖ್ಯಗುರುಗಳು – ಅಪಘಾತ ವಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿ ಕರ್ತವ್ಯದೊಂದಿಗೆ ಸಾಮಾಜಿಕ ಜವಾಬ್ದಾರಿ ತೋರಿದ ಅಂಬಣ್ಣ ಸುಣಗಾರ…..

ಬೆಂಗಳೂರು –

ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಮುಖ್ಯ ಶಿಕ್ಷಕರೊಬ್ಬರು ಹೌದು ವಿಜಯಪುರ ಜಿಲ್ಲೆಯ ಹಿರೇಮ ಸಳಿ ರಸ್ಸೆಯಲ್ಲಿನ ಹಿರೇರೂಗಿ ಮಿರಗಿ ಶಾಲೆಯ ಬಳಿ ವ್ಯಕ್ತಿಯೊಬ್ಬರು ಬೈಕ್ ಅಪಘಾತವಾಗಿ ರಸ್ತೆಯಲ್ಲಿಯೇ ಬಿದ್ದಿದ್ದರು.ತೀವ್ರವಾದ ರಕ್ತದಲ್ಲಿ ಬಿದ್ದು ಒದ್ದಾಡುತ್ತಿದ್ದ ವ್ಯಕ್ತಿಯೊಬ್ಬರ ಸ್ಥಿತಿಯನ್ನು ನೋಡಿದ ಸರ್ಕಾರಿ ಶಾಲೆಯ ಪ್ರಧಾನ ಗುರುಗಳೊಬ್ಬರು ಮಾನವೀಯತೆಯ ಕಾರ್ಯ ವನ್ನು ಮಾಡಿದ್ದಾರೆ.

ಕೂಡಲೇ ಸ್ಥಳದಲ್ಲಿ ನಿಂತುಕೊಂಡ ಅಂಬಣ್ಣ ಸುಣಗಾರ ಮುಖ್ಯಗುರುಗಳು ಹಾಗೇ ಇಂಡಿ ಶಿಕ್ಷಕರ ಸಂಘದ ಅಧ್ಯಕ್ಷ ರಾದ ಇವರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯ ನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಯನ್ನು ಕೋಡಿಸಿ ನಂತರ ಅವರನ್ನು ಮನೆಗೆ ಬಿಟ್ಟು ಬಂದಿದ್ದಾರೆ. ಮಕ್ಕಳಿಗೆ ಕೇವಲ ಅಕ್ಷರಗಳನ್ನು ಕಲಿಸೋದು ಅಷ್ಟೇ ನಮ್ಮ ಕರ್ತವ್ಯ ಎನ್ನದೇ ಶಿಕ್ಷಕರ ಸಾಮಾಜಿಕ ಜವಾಬ್ದಾರಿ ಏನು ಎಂಬೋದನ್ನು ಇವರು ಈ ಮೂಲಕ ತೋರಿಸಿ ಕೊಟ್ಟಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಸಾಮಾ ಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿ ದ್ದು ಶಿಕ್ಷಕ ಬಂಧುಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!
%d bloggers like this: