ಧಾರವಾಡ –
ಹೆಸರಿಗೆ ಮಾತ್ರ ಉಚಿತ ವಿಸರ್ಜನೆ ಮಾಡಲು ಹೋದ್ರೆ 5 ರೂಪಾಯಿ – ಇಲ್ಲೂ ಬೋರ್ಡ್ ನಲ್ಲಿ ಒಂದು ವಸೂಲಿಯಲ್ಲಿ ಮತ್ತೊಂದು…..ಇದು ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿನ ಶೌರ ವ್ಯವಸ್ಥೆ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಏನೇ ಮಾಡಿದ್ರು ನಡೆಯುತ್ತದೆ ಎಂಬೊದಕ್ಕೆ ಇಲ್ಲಿನ ಶೌಚಾಲಯವೇ ಸಾಕ್ಷಿ.ಹೊಸ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗಾಗಿ ಪ್ರತ್ಯೇಕವಾದ ಶೌಚಾಲಯಗಳಿವೆ.ಸಾರ್ವಜನಿಕರಿಗೆ ಅನುಕೂಲ ಆಗಲಿ ಎಂದು ಇಲಾಖೆಯವರು ಶೌಚಾಲಯವನ್ನು ಮಾಡಿದ್ದು ಒಂದು ವಿಚಾರವಾದರೆ ಮೂತ್ರ ವಿಸರ್ಜನೆಗೆ ಉಚಿತವಾಗಿದ್ದು ಶೌಚಾಲಯಕ್ಕೆ 5 ರೂಪಾಯಿ ಹಣವನ್ನು ನಿಗದಿ ಮಾಡಲಾಗಿದೆ.
ಇಲಾಖೆಯವರೇ ಹೀಗೆ ಶೌಚಾಲಯದ ಹೊರಗಡೆ ದೊಡ್ಡದಾಗಿ ಬೊರ್ಡ್ ನಲ್ಲಿ ಬರೆದಿದ್ದಾರೆ.ಇಲ್ಲಿ ಇರೊದು ಒಂದು ಆದರೆ ಇಲ್ಲೂ ಕೂಡಾ ವಸೂಲಿಯಲ್ಲಿ ಮತ್ತೊಂದು ಗೊಲ್ಮಾಲ್ ನಡೆಯುತ್ತದೆ.ಮೂತ್ರ ವಿಸರ್ಜನೆ ಉಚಿತವಾಗಿದೆ ಎಂದು ಬೋರ್ಡ್ ನಲ್ಲಿ ಬರೆದಿದ್ದರೂ ಕೂಡಾ ಯಾರಾದರೂ ಮೂತ್ರ ವಿಸರ್ಜನೆಗೆ ಹೋದ್ರೆ 5 ರೂಪಾಯಿ ಕೊಡಬೇಕು ಇನ್ನೂ ಶೌಚಾಲಯಕ್ಕೆ ಹೋದ್ರೆ 10 ರೂಪಾಯಿ ಕೊಡಬೇಕು ಇಲ್ಲೂ ಕೂಡಾ ವಸೂಲಿಯಲ್ಲಿ ಬೇರೆ ಬೇರೆ ನಡೆಯು ತ್ತಿದ್ದು ದಾಖಲೆಯಲ್ಲಿ ಒಂದು ವಸೂಲಿಯಲ್ಲಿ ಇನ್ನೊಂದು ಆಗುತ್ತಿದೆ
ಅಪ್ಪಿ ತಪ್ಪಿ ಇದನ್ನು ಯಾರಾದ್ರೂ ಪ್ರಶ್ನೆ ಮಾಡಿದ್ರೆ ಅವರ ಮೇಲೆ ಶೌಚಾಲಯ ಗುತ್ತಿಗೆ ಪಡೆದವರ ದರ್ಪ ಮಾತ್ರ ಹೇಳತೀರದು ಕೆಲವೊಮ್ಮೆ ಹಲ್ಲೆ ಮಾಡುವ ಹಂತಕ್ಕೆ ಗುತ್ತಿಗೆದಾರನು ವರ್ತನೆ ಮಾಡಿರುವ ಹಲವು ಬಾರಿ ನಡೆದಿದ್ದು ಯಾರು ಹೇಳೊರು ಕೇಳೊರು ಇಲ್ಲದಂತಾ ಗಿದ್ದು ಒಂದು ಕಡೆಗೆ ದುಬಾರಿಯಾದ ಲಕ್ಷ ಲಕ್ಷ ಬಾಡಿಗೆ ಯನ್ನು ವಸೂಲಿ ಮಾಡ್ತಾ ಇದ್ದರೆ
ಇತ್ತ ಶೌಚಾಲಯ ದಲ್ಲೂ ಕೂಡಾ ದೊಡ್ಡ ಪ್ರಮಾಣದಲ್ಲಿ ವಸೂಲಿ ನಡೆಯುತ್ತಿದ್ದು ಉತ್ಸಾಹಿ ಡಿಸಿಯವರೇ ಹೇಗೆ ನಿಮ್ಮ ನೆರಳಿನಲ್ಲಿ ನಡೆಯುತ್ತಿದೆ ಒಮ್ಮೆ ನೋಡಿ ಕಂಟ್ರೋಲ್ ಮಾಡಿ
ಸುದ್ದಿ ಸಂತೆ ನ್ಯೂಸ್ ಧಾರವಾಡ……