ಬೆಂಗಳೂರು –
ಕರಾವಳಿ ಕರ್ನಾಟಕ ಭಾಗದಲ್ಲಿ ಮುಂದಿನ 24 ಗಂಟೆ ಕಾಲ ಭರ್ಜರಿ ಮಳೆ ಬೀಳಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ನೀಡಿದೆ ಈ ಒಂದು ಸಂದೇಶದ ಹಿನ್ನೆಲೆಯಲ್ಲಿ ಮತ್ತು ಗುಡುಗು & ಸಿಡಿಲು ಸಹಿತ ಮಳೆ ಬೀಳಲಿದ್ದು ಭಾರಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ನಿರಂತರ ಮಳೆ ಸುರಿಯುವ ಸೂಚನೆ ಕಾರಣ ಈಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜೂನ್ 27ಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಆದೇಶವನ್ನು ಹೊರಡಿಸಿ ದ್ದಾರೆ ಅಂಗನವಾಡಿಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..