ಹುಬ್ಬಳ್ಳಿ ಧಾರವಾಡ –
ವರ್ಷವಾದ್ರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪಾವತಿಯಾಗದ ಬಿಲ್ ಗಳು – ಪೈಲ್ ಗಳನ್ನು ಕೊಟ್ಟರು ಕಣ್ತೇರೆದು ನೋಡದ ಅಧಿಕಾರಿಗಳು ಸುತ್ತಾಡಿ ಸುತ್ತಾಡಿ ಬೇಸತ್ತ ಗುತ್ತಿಗೆದಾರರು
ರಾಜ್ಯದ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೇ ಕರೆಯುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರ ಸಮಸ್ಯೆ ಸಂಕಷ್ಟ ಕೇಳೊರಿಲ್ಲ ಹೇಳೊರಿಲ್ಲ.ಹೌದು ಕೆಲಸ ಮಾಡೊದು ಒಂದು ಸಮಸ್ಯೆಯಾದರೆ ಇನ್ನೂ ಕೆಲಸ ಮಾಡಿದ ಮೇಲೆ ಬಿಲ್ ತಗೆದುಕೊಳ್ಳೊದು ಮತ್ತೊಂದು ದೊಡ್ಡ ಸಮಸ್ಯೆ ಇದಕ್ಕೆ ತಾಜಾ ಉದಾಹರಣೆ ಈ ಒಂದು ಗುತ್ತಿಗೆದಾರ.
ಎಲ್ಲೋ ಇದ್ದ ಇವರ ಕೆಲಸ ಕಾರ್ಯಗಳನ್ನು ನೋಡಿ ಇವರು ಒಳ್ಳೇಯ ಗುತ್ತಿಗೆದಾರರಾಗಿದ್ದು ಇವರಿಂದ ಇನ್ನಷ್ಟು ನಮ್ಮ ನಗರ ಅಭಿವೃದ್ದಿಯಾಗಲಿ ಎಂದು ಕೊಂಡು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಇಲ್ಲಿಗೆ ಕರೆದುಕೊಂಡು ಬಂದರು.ಪಾಲಿಕೆಯ ಟೆಂಡರ್ ನಲ್ಲಿ ಪಾಲ್ಗೊಂಡು ಎರಡು ಕಾಮಗಾರಿಗಳನ್ನು ತಗೆದು ಕೊಂಡು ಕೆಲಸಗಳನ್ನು ಮಾಡಿದ್ರು ತಗೆದುಕೊಂಡ ಎರಡು ಕೆಲಸಗಳು ಕೂಡಾ ಮುಗಿಸಿ ಅಧಿಕಾರಿಗಳಿಂದ ಜನಪ್ರತನಿಧಿಗಳಿಂದ ಬೆನ್ನು ತಟ್ಟಿಸಿಕೊಂಡಿದ್ದಾರೆ
ಇದೇಲ್ಲಾ ಒಂದು ವಿಚಾರವಾದರೆ ಇನ್ನೂ ಕೆಲಸಗಳನ್ನು ಮುಗಿಸಿ ಎಲ್ಲಾ ದಾಖಲೆಗಳೊಂದಿಗೆ ಪಾಲಿಕೆಯ ಲೆಕ್ಕಪತ್ರ ವಿಭಾಗಕ್ಕೆ ಪೈಲ್ ಗಳನ್ನು ಸಲ್ಲಿಸಿದ್ದಾರೆ. ಕೆಲಸ ಗಳನ್ನು ಮುಗಿಸಿ ಎರಡು ವರ್ಷಗಳಾಗುತ್ತಾ ಬಂದಿದ್ದು ಪೈಲ್ ಗಳನ್ನು ಸಲ್ಲಿಕೆ ಮಾಡಿ ಒಂದು ವರ್ಷ ಕಳೆದಿದೆ ಈವರೆಗೆ ಈ ಒಂದು ಗುತ್ತಿಗೆದಾರನ ಬಿಲ್ ಗಳನ್ನು ಪಾಲಿಕೆಯ ಅಧಿಕಾರಿಗಳು ಪಾವತಿ ಮಾಡುತ್ತಿಲ್ಲ ಕೆಲಸ ಮುಗಿದಿದೆ ಬಿಲ್ ಕೊಡಿ ಕೊಡಿ ಎಂದು ಕೇಳಿ ಕೇಳಿ ಅವರಿಂದ ಇವರಿಂದ ಈ ಹಿಂದಿನ ಆಯುಕ್ತರಿಗೆ ಹೇಳಿಸಿ ಹೇಳಿಸಿ ಬೇಸತ್ತಿದ್ದು ಇನ್ನೂ ಮುಖ್ಯಲೆಕ್ಕಾಧಿಕಾರಿಗಳ ಗಮನಕ್ಕೆ ತಗೆದುಕೊಂಡು ಬಂದರು ಕೂಡಾ ನೋಡುತ್ತಿಲ್ಲ ಸ್ಪಂದಿಸುತ್ತಿಲ್ಲ
ಹೀಗಾಗಿ ಆ ಒಂದು ಗುತ್ತಿಗೆದಾರರ ಬಿಲ್ ಗಳ ಪೈಲ್ ಗಳು ಎಲ್ಲಿಗೆ ಎಂಬೊದು ಕೂಡಾ ಪಾಲಿಕೆಯ ಲೆಕ್ಕಪತ್ರ ವಿಭಾಗದ ಅಧಿಕಾರಿಗಳಿಗೆ ಗೊತ್ತಿಲ್ಲ ಧೂಳು ತಿನ್ನುತ್ತಿ ರುವ ಈ ಒಂದು ಪೈಲ್ ಗಳನ್ನು ಹುಡುಕಾಡಿಸಿ ಕೆಲಸ ಮುಗಿಸಿ ವರ್ಷದಿಂದ ಬಿಲ್ ಗಾಗಿ ಪಾಲಿಕೆಗೆ ತಿರುಗಾ ಡುತ್ತಿರುವ ಗುತ್ತಿಗೆಗಾರನ ನೋವಿಗೆ ಹೊಸದಾಗಿ ಪಾಲಿಕೆಗೆ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ ಘಾಳಿಯವರು ಸ್ಪಂದಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..