ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಹೊಸ ಟಚ್ ನೀಡಲು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಮಾಸ್ಟರ್ ಪ್ಲಾನ್ ಶೀಘ್ರದಲ್ಲೇ ರಾಜ್ಯದ ಎರಡನೇಯ ಮಹಾನಗರ ಪಾಲಿಕೆಗೆ ಸಿಗಲಿದೆ ಹೊಸ ಡಿಜಿಟಲ್ ಟಚ್….. ಆಯುಕ್ತ ರೊಂದಿಗೆ ಇದೆ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ವಿಶ್ವನಾಥ್ ರವರ ಮಾಸ್ಟರ್ ಪ್ಲಾನ್…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನ ಗರ ಪಾಲಿಕೆ ಎಂದೇ ಗುರುತಿಸಿಕೊಂಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಹೊಸ ಸ್ಪರ್ಶ ಸಿಗಲಿದೆ.ಹೌದು ಈಗಾಗಲೇ ಪಾಲಿಕೆಗೆ ಖಡಕ್ ಅಧಿಕಾರಿಯಾಗಿ ಬಂದಿರುವ ಡಾ ಈಶ್ವರ ಉಳ್ಳಾಗಡ್ಡಿಯವರು ಪಾಲಿಕೆಗೆ ಬಂದ ಮೇಲೆ ಸದಾ ಒಂದಿಲ್ಲೊಂದು ಪ್ಲಾನ್ ಮೂಲಕ ಕರ್ತವ್ಯವನ್ನು ಮಾಡುತ್ತಿರುವ ಇವರು
ಸಧ್ಯ ಪಾಲಿಕೆಗೆ ಡಿಜಿಟಲ್ ಟಚ್ ನೀಡಲು ಮುಂದಾಗಿದ್ದಾರೆ.ಹೌದು ಬದಲಾದ ಕಾಲ ಮಾನದಲ್ಲಿ ವ್ಯವಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಪಾಲಿಕೆಗೆ ಆಧುನಿಕತೆಯ ಸ್ಪರ್ಶವನ್ನು ನೀಡಲು ಮುಂದಾಗಿದ್ದಾರೆ. ಪಾಲಿಕೆಯ ಇತಿಹಾಸದಲ್ಲಿಯೇ ಈವರೆಗೆ ಆಗಿರುವ ಆಗುತ್ತಿರುವ ಎಲ್ಲಾ ವ್ಯವಸ್ಥೆಗೆ ಆಯುಕ್ತರು ಡಿಜಿಟಲ್ ಟಚ್ ನೀಡಲು ಮುಂದಾಗಿದ್ದಾರೆ.
ಪಾಲಿಕೆಯ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಆಸ್ತಿಯ ದಾಖಲೆ,ತೆರಿಗೆ ಪಾವತಿ,ಇತರೆ ಸೇವೆ ಸೇರಿದಂತೆ ಸಾರ್ವಜನಿಕರಿಗೆ ಬೇಕಾದ ಎಲ್ಲಾ ಸೌಲಭ್ಯ ಮತ್ತು ವ್ಯವಸ್ಥೆಗೆ ಆಧುನಿಕತೆಯ ಸ್ಪರ್ಶ ನೀಡಲು ಮುಂದಾಗಿದ್ದಾರೆ.ಈ ಒಂದು ವಿಚಾರ ಕುರಿತಂತೆ ಈಗಾಗಲೇ ಪಾಲಿಕೆಯಲ್ಲಿ ಮುಖ್ಯ ಲೆಕ್ಕಾಧಿಕಾ ರಿಯಾಗಿರುವ ವಿಶ್ವನಾಥ ಅವರೊಂ ದಿಗೆ ಸುಧೀರ್ಘವಾಗಿ ಚರ್ಚೆಯನ್ನು ಮಾಡಿರುವ ಆಯುಕ್ತರು ಇತರೆ ಅಧಿಕಾರಿಗಳೊಂದಿಗೆ ಈ ಒಂದು ವಿಚಾರ ಕುರಿತಂತೆ ಶೀಘ್ರದಲ್ಲೇ ಪೈನಲ್ ಹಂತದಲ್ಲಿ ಸಭೆಯನ್ನು ಮಾಡಿ ಡಿಜಿಟಲ್ ಕರಣಗೊಳಿಸಲು ಅಂತಿಮ ರೂಪರೇಷೆಯ ಪ್ಲಾನ್ ಮಾಡಲಿದ್ದಾರೆ
ಇದರೊಂದಿಗೆ ಪಾಲಿಕೆಗೆ ಹೊಸ ಡಿಜಿಟಲ್ ಟಚ್ ಸಿಕ್ಕಂತಾಗಲಿದ್ದು ಬದಲಾದ ಕಾಲ ಘಟ್ಟದಲ್ಲಿ ಈ ಒಂದು ವ್ಯವಸ್ಥೆ ಜಾರಿಗೆ ಬಂದರೆ ಪಾಲಿಕೆ ಕೂಡಾ ಹೊಸ ರೂಪದೊಂದಿಗೆ ಆಡಳಿತದಲ್ಲಿ ಬದಲಾವ ಣೆಯಾಗಿ ಸಾರ್ವಜನಿಕರಿಗೆ ಮತ್ತಷ್ಟು ಸೇವೆ ಯನ್ನು ತುರ್ತಾಗಿ ನೀಡಲಿ
ಪಾಲಿಕೆಯ ಆಯುಕ್ತರ ಈ ಒಂದು ಮಹತ್ವದ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿ ಈ ಒಂದು ನಿರೀಕ್ಷೆಯಲ್ಲಿ ಅವಳಿ ನಗರದ ಜನತೆಗೆ ಮತ್ತಷ್ಟು ಪಾಲಿಕೆಯಿಂದ ಒಳ್ಳೇಯ ಕೆಲಸ ಕಾರ್ಯಗಳಾ ಗಲಿ ಎಂಬೊದು ನಮ್ಮ ಆಶಯವಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..