ಹುಬ್ಬಳ್ಳಿ –
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾ ಗದಿದ್ದರೆ ಖುರ್ಚಿ ಖಾಲಿ ಮಾಡಿ ರಾಜು ನಾಯಕವಾಡಿ ಆಗ್ರಹ – ಮಳೆಯಿಂದ ನೂರೆಂಟು ಸಮಸ್ಯೆಗಳಿಗೆ ಸ್ಪಂದಿಸದ ಮಹಾನಗರ ಪಾಲಿಕೆ,ಶಾಸಕರ ವಿರುದ್ದ ಆಕ್ರೋಶ
ಬಿಡುವಿಲ್ಲದೇ ಸುರಿಯುತ್ತಿರುವ ಮಳೆಯಿಂದಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಸ್ಥವ್ಯಸ್ಥತೆ ಕಂಡು ಬರುತ್ತಿದೆ.ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಸಾರ್ವಜನಿಕರು ಸಂಚಾರ ಮಾಡ. ಲಾರದಂತಹ ಪರಸ್ಥಿತಿ ನಿರ್ಮಾಣವಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಪರದಾಡುತ್ತಿದ್ದರು ಕೂಡಾ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಾಗಲಿ,ಶಾಸಕರಾಗಲಿ ಕಣ್ತೇರೆದು ನೋಡುತ್ತಿಲ್ಲ ಕಂಡು ಕಾಣದಂತೆ ಕೇಳಿ ಕೇಳಲಾರದಂತೆ ಇದ್ದಾರೆ
ಹೀಗಿರುವಾಗ ಸದಾ ಸಾರ್ವಜನಿಕರ ಒಂದಿ ಲ್ಲೊಂದು ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತುತ್ತಿರುವ ಯುವ ಮುಖಂಡ ಹೋರಾಟಗಾರ ರಾಜು ಅನಂತಸಾ ನಾಯಕವಾಡಿ ಈಗ ಮಳೆಯಿಂದಾಗಿ ಹದಗೆಟ್ಟಿರುವ ನಗರದಲ್ಲಿನ ಪರಸ್ಥಿತಿ ಕುರಿತಂತೆ ಧ್ವನಿ ಎತ್ತಿದ್ದಾರೆ.ಹೌದು ಮಳಿಯಿಂದಾಗಿ ನಗರದ ಹಲವೆಡೆ ಹಲವು ಅವಾಂತರಗಳು ಸಮಸ್ಯೆಗಳಾಗಿದ್ದು ಹೀಗಿರು ವಾಗ ಸಧ್ಯ ಈ ಒಂದು ಪರಸ್ಥಿತಿಯನ್ನು ಅವಲೋಕಿಸಬೇಕಾದವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದರೆ
ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ನೋಡಿ ನೋಡ ಲಾರದಂತೆ ಇದ್ದಾರೆ ಕಂಡು ಕಾಣದಂತೆ ಇದ್ದಾರೆ ಹೀಗಾಗಿ ಬಿಡುವಿಲ್ಲದ ಮಳೆಯ ನಡುವೆ ಸಾರ್ವಜನಿಕರು ಪರದಾಡುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸದ ಪಾಲಿಕೆಯ ಮತ್ತು ಸ್ಥಳೀಯ ಶಾಸಕರ ವಿರುದ್ದ ರಾಜು ನಾಯಕವಾಡಿ ಅಸಮಾಧನ ವನ್ನು ವ್ಯಕ್ತಪಡಿಸಿದ್ದು
ಈ ಕೂಡಲೇ ಸಮಸ್ಯೆ ಗಳಿಗೆ ಸ್ಪಂದಿಸಬೇಕು ಇಲ್ಲವಾದರೆ ರಾಜೀನಾಮೆ ನೀಡಿ ಹೋಗಿ ಎನ್ನುತ್ತಾ ಮೂರು ದಿನಗಳ ಗಡುವನ್ನು ನೀಡಿದ್ದು ಮಾಡದಿದ್ದರೆ ಸ್ವತಃ ಹಣದಿಂದ ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಿ ಸೊದಾಗಿ ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..