ಕಾರ್ಕಳ –
ಇಂಗ್ಲಿಷ್ ಮಾಧ್ಯಮ ಶಾಲೆಗಳ ಭರಾಟೆಯ ನಡುವೆ ಕನ್ನಡ ಶಾಲೆಗಳು ಮುಚ್ಚುತ್ತಾ ಬರುತ್ತಿರುವ ವಿಷಯ ಹೊಸದೇ ನಲ್ಲ.ಕನ್ನಡ ಶಾಲೆಯಲ್ಲೇ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ, ಉನ್ನತ ಉದ್ಯೋಗ ಹಾಗೂ ಘನತೆ ಸಾಧಿಸಿದ ಹತ್ತಾರು ಮಂದಿ ಕನ್ನಡ ಶಾಲೆಯ ಕುರಿತು ಅಭಿಮಾನ ವನ್ನು ಇಟ್ಟುಕೊಂಡವವರೂ ಬಹಳಷ್ಟು ಮಂದಿ ಇದ್ದಾರೆ ಹೌದು ಇದರ ನಡುವೆ ಉಡುಪಿ ತಾಲ್ಲೂಕಿನ ನಂದಳಿಕೆ ಎಂಬ ಗ್ರಾಮೀಣ ಪ್ರದೇಶದ ಅದರಲ್ಲೂ ಶತಮಾನದ ಹೊಸ್ತಿಲಲ್ಲಿರುವ ಏಕೈಕ ಕನ್ನಡ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳಲು ಶಾಲೆಯ ಹಳೆವಿದ್ಯಾರ್ಥಿಗಳು ಮುಂದಾ ಗಿದ್ದಾರೆ.ವಿನೂತನ ಯೋಜನೆಯನ್ನು ಹಮ್ಮಿಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯಲು ವಿಶೇಷ ಪ್ರಯತ್ನ ನಡೆಸಿದ್ದಾರೆ.

ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದ ಈ ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಳ್ಳಲಿ ರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ₹ 1 ಸಾವಿರ ಪ್ರೋತ್ಸಾ ಹಧನ ನೀಡಲು ಯೋಜನೆ ಹಾಕಲಾಗಿದೆ.ಈ ಮೂಲಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಯೋಜಿಸ ಲಾಗಿದೆ.ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲ ಚಂದ್ರ ಶೆಟ್ಟಿ ನೇತೃತ್ವದಲ್ಲಿ ವಿಶೇಷ ಕೊಡುಗೆ ಪರಿಚಯಿಸ ಲಾಗಿದೆ.ಸರ್ಕಾರಿ ಶಾಲೆಯ ಯಾವುದೇ ತರಗತಿಗೆ ವಿದ್ಯಾರ್ಥಿ ದಾಖಲಾತಿ ಪಡೆದರೆ ದಾಖಲಾತಿ ಹೊಂದಿದ ಪ್ರತಿ ವಿದ್ಯಾರ್ಥಿಗೆ ಹಳೆವಿದ್ಯಾರ್ಥಿ ಸಂಘದ ಮೂಲಕ ವಿಶೇಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಸಂಘ ತಿಳಿಸಿದೆ.
ಈ ಪ್ರಾಥಮಿಕ ಶಾಲೆ (ಬೋರ್ಡು ಶಾಲೆ) ನಂದಳಿಕೆ ಗ್ರಾಮ ದಲ್ಲಿರುವ ಏಕೈಕ ಸರ್ಕಾರಿ ಕನ್ನಡ ಶಾಲೆಯಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿ ಉನ್ನತ ಹುದ್ದೆ ಯಲ್ಲಿದ್ದಾರೆ.ಅಲ್ಲದೆ, ಸರ್ಕಾರಿ ಸೇವೆಯಲ್ಲಿ,ಸರ್ಕಾರಿ ವೈದ್ಯ ರಾಗಿ ಕಾರ್ಯನಿರ್ವಹಿಸುತ್ತಿವವರು ಹಲವರಿದ್ದಾರೆ. ಅವ ರೆಲ್ಲ ತಮ್ಮ ಶಾಲಾ ಶಿಕ್ಷಣದ ಕುರಿತು ಅಭಿಮಾನ ಹೊಂದಿ ದ್ದಾರೆ.ಶಾಲೆಯಲ್ಲಿ ಪ್ರಸ್ತುತ 64 ವಿದ್ಯಾರ್ಥಿಗಳು ವಿದ್ಯಾ ರ್ಜನೆ ಮಾಡುತ್ತಿದ್ದಾರೆ.ನಾಲ್ವರು ಸರ್ಕಾರಿ ಶಿಕ್ಷಕರು ಮತ್ತು ಇಬ್ಬರು ಗೌರವ ಶಿಕ್ಷಕರು ಇದ್ದಾರೆ.