ಬೆಂಗಳೂರು –
ಅಬಕಾರಿ ಖಾತೆಯಿಂದ ಅಸಮಾಧಾನಗೊಂಡಿದ್ದ ಎಂಟಿಬಿ ಗೆ ಕೊನೆಗೂ ಮುಖ್ಯಮಂತ್ರಿ ಖಾತೆಯನ್ನು ಬದಲಾವಣೆ ಮಾಡಿದ್ದಾರೆ. ಎಂಟಿಬಿಗೆ ನೀಡಲಾಗಿದ್ದ ಅಬಕಾರಿ ಖಾತೆಯನ್ನು ಹಿಂದೆ ಪಡೆದ ಸಿಎಮ್ ಪೌರಾಡಳಿತ ಖಾತೆಯನ್ನು ನೀಡಿದ್ದಾರೆ. ಒತ್ತಡಕ್ಕೆ ಮಣಿದು ಖಾತೆಯನ್ನು ಬದಲಾವಣೆ ಮಾಡಿ ಮತ್ತೆ ಇನ್ನೂ ಕೆಲವರಿಗೆ ಮತ್ತಷ್ಟು ಖಾತೆಯನ್ನು ಅಲ್ಪ ಸ್ವಲ್ಪು ಬದಲಾವಣೆ ಮಾಡಿದ್ದಾರೆ. ಖಾತೆ ಹಂಚಿಕೆ ಸಂಬಂಧ ಉದ್ಭವಾಗಿದ್ದ ಬಿಕ್ಕಟ್ಟು ಶಮನದ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತೆ ಕೆಲವರ ಖಾತೆಗಳಲ್ಲಿ ಬದಲಾವಣೆ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಅಬಕಾರಿ ಖಾತೆ ಒಪ್ಪಿಕೊಳ್ಳುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದ ಎಂಟಿಬಿ ನಾಗರಾಜ್ ಹಠಕ್ಕೆ ಮಣಿದಿರುವ ಸಿಎಂ ಅವರಿಗೆ ಅಬಕಾರಿ ಬದಲು ಪೌರಾಟಳಿತ ಮತ್ತು ಸಕ್ಕರೆ ಖಾತೆಯನ್ನು ದಯಪಾಲಿಸಿದ್ದಾರೆ. ಇದೇ ವೇಳೆ ತಮಗೆ ನೀಡಲಾಗಿದ್ದ ಖಾತೆ ಬಗ್ಗೆ ತಕರಾರು ಎತ್ತಿದ್ದ ಗೋಪಾಲಯ್ಯಗೆ ಈಗ ಅಬಕಾರಿ ಖಾತೆ ನೀಡಲಾಗಿದೆ.ಇನ್ನು ತಮ್ಮ ಬಳಿಯಿಂದ ಪ್ರಮುಖ ಖಾತೆಗಳನ್ನು ಕಿತ್ತುಕೊಂಡಿದ್ದಕ್ಕೆ ಬೇಸರಗೊಂಡಿರುವ ಮಾಧುಸ್ವಾಮಿಗೆ ವೈದ್ಯ ಶಿಕ್ಷಣದ ಜೊತೆಗೆ ಹಜ್ ಮತ್ತು ವಕ್ಫ್ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇದೇ ರೀತಿ ಅರವೀದಮ ಲಿಂಬಾವಳಿ ಅವರಿಗೆ ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ಇನ್ನೂಳಿದಂತೆ ಶಂಕರ್ ಮತ್ತು ನಾರಾಯಣ ಗೌಡರಿಗೆ ಹೆಚ್ಚುವರೆ ಹೊಣೆಗಾರಿಕ ನೀಡಲಾಗಿದೆ. ಶಂಕರ್ ತೋಟಗಾರಿಕೆ ಮತ್ತು ರೇಷ್ಮೆ ನಾರಾಯಣಗೌಡರಿಗೆ ಯುವ ಸಬಲೀಕರಣದ ಜೊತೆಗೆ ಅಂಕಿ ಸಂಖ್ಯೆ ಇಲಾಖೆಯ ಹೊಣೆ ವಹಿಸಲಾಗಿದೆ. ಆರೋಗ್ಯ ಖಾತೆ ಜೊತೆ ಹೊಂದಿದ್ದ ವೈದ್ಯ ಶಿಕ್ಷಣ ಇಲಾಖೆಯ ಹೊಣೆಯನ್ನು ವಾಪಸ್ ಪಡೆದಿದ್ದಕ್ಕೆ ಸುಧಾಕರ್ ಸಹ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದರೆ ಅವರ ಖಾತೆಯಲ್ಲಿ ಹೊಸದಾಗಿ ಯಾವುದೇ ಬದಲಾವಣೆ ಆಗಿಲ್ಲ.