ಹುಬ್ಬಳ್ಳಿ –
ಗ್ರಾಮೀಣ ಕ್ರೀಡಾ ಪ್ರತಿಭೆಗೆ ಶಕ್ತಿ ತುಂಬಿದ KGP ಗ್ರೂಪ್ ಯೋಗ ಪಟುವಿಗೆ ಆರ್ಥಿಕ ನೆರವು ನೀಡಿ ಕ್ರೀಡಾ ಪ್ರತಿಭೆಗೆ ನೀರೆರೆದ ಶ್ರೀಗಂಧ ಶೇಟ್…..ಮಗನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಗಣೇಶ್ ಶೇಟ್
ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಬೂದಿಹಾಳ ಗ್ರಾಮದ ಆಕಾಶ ಹಡಪದ ಯೋಗ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆಯನ್ನು ಮಾಡಿದ್ದಾನೆ ತನ್ನದೆಯಾದ ಪ್ರತಿಭೆಯ ಮೂಲಕ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಆಕಾಶ್ ಗೆ ಅಂತರಾಷ್ಟ್ರೀಯ ಮಟ್ಟದಲ್ಲಿನ ಸಾಧನೆಗೆ ಆರ್ಥಿಕ ಪರಸ್ಥಿತಿ ಸಮಸ್ಯೆಯಾಗಿತ್ತು.
ಈ ಒಂದು ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹುಬ್ಬಳ್ಳಿಯ ಕೆಜಿಪಿ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್ ಅವರು ಕೂಡಲೇ ಧಾರವಾಡ ಜಿಲ್ಲಾ ಕುಂದಗೋಳ ತಾಲೂಕಿನ ಹಿರೇಬೂದಿಹಾಳ ಗ್ರಾಮದ ಆಕಾಶ್ ಹಡಪದ ಅವರನ್ನು ಸಂಪರ್ಕ ಮಾಡಿ ಬರಮಾಡಿಕೊಂಡಿದ್ದಾರೆ. ಯೋಗದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುವ ಇವರು ಯೋಗದಲ್ಲಿ ಗಿನ್ನಿಸ್ ದಾಖಲೆಯನ್ನು ಮಾಡಿದ್ದು ವಿಯೆಟ್ನಾಂ ನಲ್ಲಿ ನಡೆಯುತ್ತಿ ರುವ ಎರಡನೇ ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಲು ಹೋಗಲು ಆರ್ಥಿಕ ಸಮಸ್ಯೆಯಾಗಿತ್ತು.
ಹೋಗಲು ತೊಂದರೆಯನ್ನು ಅನುಭವಿಸುತ್ತಿದ್ದ ಇವನಿಗೆ ಕೆಜಿಪಿ ಫೌಂಡೇಶನ್ ಅಧ್ಯಕ್ಷರಾದ ಶ್ರೀಗಂಧ ಗಣೇಶ ಶೇಟ್ ಅವರು ಆರ್ಥಿಕ ಸಹಾಯವನ್ನು ಮಾಡಿದ್ದಾರೆ ಇದರೊಂದಿಗೆ ಆಕಾಶ್ ಪ್ರತಿಭೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.ಈ ಒಂದು ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಲು ಶ್ರೀಗಂಧ ಶೇಟ್ ಅವರು ಅನುಕೂಲ ಮಾಡಿಕೊಟ್ಟಿದ್ದಾರೆ.
ಇನ್ನೂ ಮತ್ತೊಂದು ಸಮಾಜ ಮುಖಿಯಾದ ಈ ಒಂದು ಕಾರ್ಯವನ್ನು ಮಾಡಿರುವ ಶ್ರೀಗಂಧ ಶೇಟ್ ಅವರ ಕಾರ್ಯಕ್ಕೆ ಗಣೇಶ್ ಶೇಟ್ ಅವರು ಅಭಿನಂದನೆ ಸಲ್ಲಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..