ನವಲಗುಂದ –
ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಯಲ್ಲಿ ಪಾಲ್ಗೊಂಡ ಶಾಸಕ N H ಕೋನರೆಡ್ಡಿ – ನವಲಗುಂದ ತಾಲ್ಲೂಕಿನ ಅಳಗವಾಡಿಯಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮ
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯನ್ನು ಧಾರವಾಡದ ನವಲಗುಂದ ದಲ್ಲೂ ಆಚರಣೆ ಮಾಡಲಾಯಿತು ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು DSERT ಬೆಂಗಳೂರು ಮತ್ತು ಜಿಲ್ಲಾಡಳಿತ ಧಾರವಾಡ, ಜಿಲ್ಲಾ ಪಂಚಾಯತ ಧಾರವಾಡ ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆ ಧಾರವಾಡ ಗ್ರಾ ಪಂ ಅಳಗ ವಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ನವಲಗುಂದ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಶ್ರೀ ಶಿವಪ್ಪ ಕಂಬಾರ, ರಘುನಾಥ ನಡುವಿನಮನಿ, ಗುರುಶಾಂತ ಗಾಣಿಗೇರ, ಅಶೋಕ ಗಾಣಿಗೇರ, ಮುದ್ದಣ್ಣ ನಡುವಿನಮನಿ, ಬಿ ಎಸ್ ಅಧೀನ, ಮಲ್ಲಪ್ಪ ಮಾಕಣ್ಣವರ, ಮಲ್ಲನಗೌಡ ರಾಟಿಮಣಿ, ಶಿವಾನಂದ ಸಿದ್ಧಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..