ಧಾರವಾಡ –
ರೇಣುಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ NH ಕೋನರೆಡ್ಡಿ – ಕ್ಷೇತ್ರದ ನಾಡಿನ ಜನತೆಗೆ ಕಲ್ಯಾಣಕ್ಕಾಗಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ ಜನಸೇವಕ ಇನ್ಸ್ಪೆಕರ್ ಶ್ರೀನಿವಾಸ ಮೇಟಿ ಉಪಸ್ಥಿತಿ…..
ಸವದತ್ತಿಯ ಯಲ್ಲಮ್ಮಗುಡ್ಡಕ್ಕೆ ನವಲಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರೆಡ್ಡಿ ಭೇಟಿ ನೀಡಿದರು.ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆೆ ಭೇಟಿ ನೀಡಿದ ಶಾಸಕರು ತಾಯಿ ರೇಣುಕಾ ದೇವಿಗೆ ವಿಶೇಷ ವಾದ ಪೂಜೆಯನ್ನು ಸಲ್ಲಿಸಿದರು.ಕ್ಷೇತ್ರದ ನಾಡಿನ ಜನತೆಯ ಕಲ್ಯಾಣಕ್ಕಾಗಿ ವಿಶೇಷವಾದ ಪೂಜೆಯನ್ನು ಸಲ್ಲಿಸಿದ ಶಾಸಕರು ಪ್ರಾರ್ಥನೆಯನ್ನು ಸಲ್ಲಿಸಿದರು.
ಭಾರತ ಹುಣ್ಣಿಮೆಯ ಪ್ರಯುಕ್ತ ಸವದತ್ತಿ ತಾಲೂಕಿನ ಸುಕ್ಷೇತ್ರ ಯಲ್ಲಮ್ಮಗುಡ್ಡದಲ್ಲಿ ನೆಲೆಸಿರುವ ತಾಯಿ ಶ್ರೀ ರೇಣುಕಾ ದೇವಿಯ ದೇವಸ್ಥಾನಕ್ಕೆ ಸಹ ಕುಟುಂಬ ದೊಂದಿಗೆ ಭೇಟಿ ನೀಡಿ ನಾಡಿನ ಜನರ ಹಾಗೂ ಕ್ಷೇತ್ರದ ಜನತೆಯ ಕಲ್ಯಾಣಕ್ಕಾಗಿ ತಾಯಿಗೆ ಪೂಜೆ ಸಲ್ಲಿಸಿ ಆ ದೇವರ ಕೃಪೆಗೆ ಪಾತ್ರರಾದರು.ಇದೇ ವೇಳೆ ತಾಯಿಯ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಕ್ಷೇತ್ರದಲ್ಲಿ ದಯ ವಿಟ್ಟು ತಾಯಿ ಯಲ್ಲಮ್ಮ ದೇವಸ್ಥಾನದ ಸುತ್ತ ಮುತ್ತಲು ಸ್ವಚ್ಛತೆಯನ್ನು ಕಾಪಾಡಿ ಆ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಿ ಎಂದು ಸಂದೇಶ ನೀಡಿದರು.
ಈ ಒಂದು ಸಂದರ್ಭದಲ್ಲಿ ಶಾಸಕರೊಂದಿಗೆ ಕುಟುಂಬದವರು ಮತ್ತು ಧಾರವಾಡ ಇನಸ್ಪೇಕ್ಟರ್ ಶ್ರೀನಿವಾಸ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..