ಧಾರವಾಡ –
ರಜೆ ಬೇಕಾ ದುಡ್ಡ ಕೊಡಿ ರಜೆ ತಗೆದುಕೊಳ್ಳಿ – ಒಂದೊಂದು ರಜೆಗೆ ಒಂದೊಂದು ರೇಟ್ ಫೀಕ್ಸ್….. ಧಾರವಾಡ BRTS ಡಿಪೋ ದಲ್ಲಿ ಚಾಲಕರ ಸುಲಿಗೆ ಕಹಾನಿ…..
ದುಡಿದು ತಿನ್ನುವವರನ್ನು ಹೇಗೆ ಸುಲಿದು ತಿನ್ನುತ್ತಾರೆ ಎಂಬೊದಕ್ಕೆ ಧಾರವಾಡ ಬಿಆರ್ ಟಿಎಸ್ ಡಿಪೋ ಸಾಕ್ಷಿಯಾಗಿದೆ.ಹೌದು ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುವ ಚಿಗರಿ ಬಸ್ ಗಳ ಪರಸ್ಥಿತಿ ಒಂದು ಕಡೆ ಸರಿಯಾಗಿಲ್ಲ ಇದರ ನಡುವೆ ಏನೇಲ್ಲಾ ಕಷ್ಟ ಪಟ್ಟು ಕರ್ತವ್ಯವನ್ನು ಮಾಡುತ್ತಿರುವ ಚಾಲಕರಿಗೆ ಸಧ್ಯ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ
ಹೌದು ಧಾರವಾಡ ಚಿಗರಿ ಬಸ್ ಡಿಪೋ ದಲ್ಲಿ ಚಾಲಕ ರಿಗೆ ರಜೆ ಬೇಕಾದರೆ ಹಣವನ್ನು ಕೊಡಬೇಕಂತೆ.ಸಧ್ಯ ಇಲಾಖೆಯ ಅಧಿಕಾರಿಗಳು ಈ ಒಂದು ರಜೆಯ ವ್ಯವಸ್ಥೆ ಯನ್ನು ಆನ್ ಲೈನ್ ವ್ಯವಸ್ಥೆ ಮಾಡಿದರು ಕೂಡಾ ಚಾಲಕರಿಗೆ ತಮಗಿರುವ ರಜೆಯ ಸೌಲಭ್ಯವನ್ನು ಪಡೆಯಬೇಕು ಎಂದರೆ ಹಣವನ್ನು ಕೊಡಬೇಕಂತೆ ಈ ಒಂದು ವಿಚಾರವು ಸಧ್ಯ ಡಿಪೋ ದಲ್ಲಿ ಚಾಲಕರಿಗೆ ದೊಡ್ಡ ತಲೆನೋವಿನ ವಿಚಾರವಾಗಿದ್ದು ರಜೆ ಬೇಕಾ ದುಡ್ಡು ಕೊಡಿ ರಜೆ ಬೇಕಾ ದುಡ್ಡು ಕೊಡಿ ಎಂಬ ಸಂದೇಶವನ್ನು ಇಬ್ಬರು ಅಧಿಕಾರಿಗಳು ಚಾಲಕರಿಗೆ ಹೇಳಿದ್ದು ಇದು ಚಾಲಕರ ಅಸಮಾಧಾನಕ್ಕೆ ಅಕ್ರೋಶಕ್ಕೆ ಕಾರಣವಾಗಿದ್ದು
ರಜೆಗಾಗಿ ಹಣವನ್ನು ಕೇಳುತ್ತಿರುವ ಅಧಿಕಾರಿಗಳು ಯಾರು ಯಾವ ರಜೆಗಾಗಿ ಎಷ್ಟು ರೇಟ್ ಫೀಕ್ಸ್ ಮಾಡಿದ್ದಾರೆ ಇದನ್ನೇಲ್ಲವನ್ನು ಸುದ್ದಿ ಸಂತೆಯ ಮುಂದಿನ ಸ್ಟೋರಿಯಲ್ಲಿ ದಾಖಲೆ ಸಮೇತವಾಗಿ ನಿರೀಕ್ಷಿಸಿ ಡಿಸಿ ಯವರೇ ಹೇಗಿದೆ ನೋಡಿ ನಿಮ್ಮ ಕೆಳಗಿನ ಅಧಿಕಾರಿಗಳು ದುಡಿದು ತಿನ್ನುವ ಚಾಲಕರನ್ನು ಹೇಗೆ ಸುಲಿದು ತಿನ್ನುತ್ತಾರೆ ನೋಡಿ
ಸುದ್ದಿ ಸಂತೆ ನ್ಯೂಸ್ ಧಾರವಾಡ…..