ಹುಬ್ಬಳ್ಳಿ –
ಧಾರವಾಡ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಜೀವನಗೌಡ್ರ – ಆತ್ಮೀಯ ಗೆಳೆಯನಿಗೆ ಅಭಿನಂದಿಸಿ ಶುಭ ಹಾರೈಸಿದ ಮಣಿಕಂಠ ಶ್ಯಾಗೋಟಿ…..
ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಜೀವನಗೌಡ್ರ ಅವರನ್ನು ನೇಮಕ ಮಾಡಲಾಗಿದೆ.ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಈ ಒಂದು ನೇಮಕಾತಿಯನ್ನು ಮಾಡಿ ಆದೇಶವನ್ನು ಮಾಡಿದ್ದಾರೆ.ಪಕ್ಷದ ಸಂಘಟನೆ ಸೇರಿ ದಂತೆ ಹಲವಾರು ವಿಚಾರಗಳಲ್ಲಿ ಪಕ್ಷದೊಂದಿಗೆ ಸದಾ ಸಕ್ರಿಯಾಗಿರುವ ಸಂತೋಷ ಜೀವನಗೌಡ್ರ ಅವರಿಗೆ ಪಕ್ಷದಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದ್ದು
ಇನ್ನೂ ಇತ್ತ ಪ್ರಧಾನ ಕಾರ್ಯದರ್ಶಿಯಾಗುತ್ತಿದ್ದಂತೆ ಸಂತೋಷ ಜೀವನಗೌಡ್ರ ಅವರನ್ನು ರಾಜ್ಯ ಎಸ್ ಟಿ ಮೋರ್ಚಾ ಘಟಕದ ಕೋಶಾಧ್ಯಕ್ಷರಾದ ಮಣಿಕಂಠ ಶ್ಯಾಗೋಟಿಯವರು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.ಹೊಸದಾಗಿ ಗ್ರಾಮೀಣ ಬಿಜೆಪಿ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯವಾಗಿ ಆಯ್ಕೆಯಾದ ಇವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……